ರಾಮ ನವಮಿ ಮೆರವಣಿಗೆ ವೇಳೆ ಮಸೀದಿ ಮೇಲೆ ಕೇಸರಿ ಬಾವುಟ ಏರಿಸಿದ ನಾಲ್ವರ ಬಂಧನ

Prasthutha|

ಮಥುರಾ: ಮಥುರಾದಲ್ಲಿ ರಾಮ ನವಮಿ ಮೆರವಣಿಗೆ ಹೋಗುವಾಗ ವ್ಯಾನ್ ನಲ್ಲಿದ್ದ ನಾಲ್ವರು ಮಸೀದಿ ಎದುರಿನ ಅಂಗಡಿ ಮೇಲೇರಿ ಕೇಸರಿ ಬಾವುಟ ಹಾರಿಸಿದ್ದ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ನವಮಿ ಮೆರವಣಿಗೆ ವೇಳೆ ಜಮಾಲ್ ಮಸೀದಿಯ ಹೊರಗಡೆ ಶಾಂತಿ ಕದಡಲು ಪ್ರಯತ್ನಿಸಿದ ಆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಗುರುವಾರ ರಾಮ ನವಮಿ ಮೆರವಣಿಗೆ ವೇಳೆ ನಾಲ್ವರು ಉತ್ತರ ಪ್ರದೇಶದ ಮಥುರಾದಲ್ಲಿ ಈ ಕೃತ್ಯ ಎಸಗಿದ್ದಾರೆ.
ಗಿಯಾಮಂಡಿ ಪ್ರದೇಶದಲ್ಲಿರುವ ರಾಮ ಮಂದಿರದಿಂದ ರಾಮ ಜನ್ಮ ಮಹೊತ್ಸವ ಸಮಿತಿಯವರು ಮೆರವಣಿಗೆ ಆಯೋಜಿಸಿದ್ದರು. ಅದು ಚೌಕ್ ಬಜಾರ್ ಪ್ರದೇಶಕ್ಕೆ ಬಂದಾಗ ಈ ಭಗವಾ ಧ್ವಜದ ಪ್ರಕರಣ ನಡೆದಿದೆ.

- Advertisement -


ಆ ನಾಲ್ವರು ಮೆರವಣಿಗೆಯ ವ್ಯಾನಿನಿಂದ ಮಸೀದಿ ಮುಂದಿನ ಅಂಗಡಿಯ ತಾರಸಿಗೆ ಏರಿ ಅಲ್ಲಿಂದ ಕೇಸರಿ ಕೊಡಿ ಹಾರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯು ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯ ವಾತಾವರಣವನ್ನು ಉಂಟು ಮಾಡಿತ್ತು.
ಎಸ್ ಎಸ್ ಪಿ- ಹಿರಿಯ ಪೊಲೀಸ್ ಸೂಪರಿನ್ ಟೆಂಡೆಂಟ್ ಶೈಲೇಶ್ ಕುಮಾರ್ ಪಾಂಡೆಯವರು ಕೂಡಲೆ ಘಟನೆ ನಡೆದ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಹಾಕಿದರು.


ಆರೋಪಿಗಳು ನಾಲ್ವರು ಎಂದರೆ ಕಾವ್ಯ, ಹನಿ, ರಾಜೇಶ್ ಮತ್ತು ದೀಪಕ್. ವೀಡಿಯೋ ಆಧಾರದಲ್ಲಿ ಅವರನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪಾಂಡೆಯವರು ತಿಳಿಸಿದರು.
“ಶಾಂತಿ ಕದಡಿದ್ದಕ್ಕಾಗಿ ಶುಕ್ರವಾರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದೂ ಎಸ್ ಎಸ್ ಪಿ ತಿಳಿಸಿದರು.

Join Whatsapp