ದೆಹಲಿ: ಖಬರಸ್ತಾನದಲ್ಲಿ ಶವ ಹೂಳಲು ತೀವ್ರ ಜಾಗದ ಕೊರತೆ

Prasthutha|

►ಹಳೆಯ ಗೋರಿಗಳ ಮೇಲೆಯೇ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಮುಸ್ಲಿಮರು

- Advertisement -

ಹೊಸದಿಲ್ಲಿ: ಕೋವಿಡ್ ಹಾವಳಿಯಿಂದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ದೆಹಲಿಯಲ್ಲಿ ಮುಸ್ಲಿಮರ ಖಬರಸ್ಥಾನದಲ್ಲಿ ಜಾಗವಿಲ್ಲದಂತಾಗಿದೆ.

ಸ್ಮಶಾನಗಳು ಬಹುತೇಕ ತುಂಬಿ ಹೋಗಿದ್ದು, ಹಳೆಯ ಗೋರಿಗಳನ್ನು ತೆರೆದು ಹೂಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವರದಿಯಾಗಿದೆ.
ದೆಹಲಿಯ ಕ್ರಿಶ್ಚಿಯನ್ ಸಮುದಾಯವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ವಿದ್ಯುತ್ ಚಿತಾಗಾರದಲ್ಲಿ ದಹಿಸಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಮುಸ್ಲಿಮರೂ ಕೂಡಾ ದಹಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಲಾಗುತ್ತಿದೆ.

- Advertisement -

ಕೋವಿಡ್‌ನ ಎರಡನೇ ಅಲೆಯಿಂದಾಗಿ ದೆಹಲಿಯ ಅತಿದೊಡ್ಡ ಮುಸ್ಲಿಂ ಸ್ಮಶಾನವೂ ತುಂಬಿ ಹೋಗಿದೆ.
ದೆಹಲಿಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 704 ಮುಸ್ಲಿಂ ಖಬರಸ್ಥಾನಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ ಇವುಗಳಲ್ಲಿ ಕೇವಲ 131 ಮಾತ್ರ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ.
ಈ 131 ರಲ್ಲಿ 16 ಸ್ಮಶಾನಗಳು ಮಾಲೀಕತ್ವದ ತಕರಾರುಗಳು ನಡೆಯುತ್ತಿರುವುದರಿಂದ ಹಾಗೂ ಕೆಸರು ಅಥವಾ ನೀರು ತುಂಬಿರುವುದರಿಂದ ಬಳಸಲಾಗುತ್ತಿಲ್ಲ.

2018 ರಲ್ಲಿ ಪ್ರಕಟವಾದ ಅಲ್ಪಸಂಖ್ಯಾತರ ಆಯೋಗದ ವರದಿಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಶವ ಸಂಸ್ಕಾರದ ವಿಷಯದಲ್ಲಿ ದೆಹಲಿ ತೀವ್ರ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಹೇಳಲಾಗಿತ್ತು.



Join Whatsapp