ಉ.ಪ್ರ ಕಾಂಗ್ರೆಸ್ ನ ಹಿರಿಯ ನಾಯಕರಿಬ್ಬರು ಟಿ.ಎಂ.ಸಿ ಸೇರ್ಪಡೆ

Prasthutha|

ಕೋಲ್ಕತ್ತಾ: ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಉತ್ತರ ಪ್ರದೇಶದ ಇಬ್ಬರು ಹಿರಿಯ ನಾಯಕರು ಸೋಮವಾರ ತೃಣಮೂಲ ಕಾಂಗ್ರೆಸ್ ಸೇರ್ಪಡೆಗೊಂಡರು.

- Advertisement -

ರಾಜೇಶಪತಿ ತ್ರಿಪಾಠಿ ಮತ್ತು ಲಲಿತೇಶ್ ಪತಿ ತ್ರಿಪಾಠಿ ಎಂಬವರು ಸೇರ್ಪಡೆಗೊಂಡರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಟಿ.ಎಂ.ಸಿ ವರಿಷ್ಠರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹೋರಾಟ ನಡೆಸುವುದಾಗಿ ತಿಳಿಸಿದರು.

ರಾಜೇಶಪತಿ ತ್ರಿಪಾಠಿ ಮಾಜಿ ಎಮ್.ಎಲ್.ಸಿ ಆಗಿದ್ದರೆ, ಲಲಿತೇಶ್ ಪತಿ ತ್ರಿಪಾಠಿ ಉತ್ತರ ಪ್ರದೇಶ ಕಾಂಗ್ರೆಸ್ ನ ಮಾಜಿ ಉಪಾಧ್ಯಕ್ಷ ಮತ್ತು ಶಾಸಕರಾಗಿದ್ದಾರೆ. ರಾಜೇಶಪತಿ ಮತ್ತು ಲಲಿತೇಶ್ ಪತಿ ಕ್ರಮವಾಗಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿ ಅವರ ಮೊಮ್ಮಗ ಮತ್ತು ಮರಿಮೊಮ್ಮಗರಾಗಿದ್ದಾರೆ ಎಂದು ಟಿ.ಎಂ.ಸಿ ಮೂಲಗಳು ತಿಳಿಸಿವೆ.

- Advertisement -

ಟಿ.ಎಂ.ಸಿ ಬಗ್ಗೆ ಜನರ ನಂಬಿಕೆ ವೃದ್ಧಿಸಿದ್ದು, ಈ ಇಬ್ಬರ ನಾಯಕರ ಸೇರ್ಪಡೆಯೊಂದಿಗೆ ನಾವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದ್ದೇವೆ. ಮಾತ್ರವಲ್ಲ ಈ ಸಂದರ್ಭದಲ್ಲಿ ಬಿಜೆಪಿಗೆ ನಿಜವಾದ ಹೋರಾಟವನ್ನು ನೀಡುತ್ತೇವೆ ಎಂದು ಬ್ಯಾನರ್ಜಿ ಹೇಳಿದರು.

ಗೋವಾದಲ್ಲಿ ಟಿ.ಎಂ.ಸಿ ತನ್ನ ಪಕ್ಷವನ್ನು ಬಲಪಡಿಸದಂತೆ ಬಿಜೆಪಿ ತಡೆಯುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ ಕೆಲವೇ ದಿನಗಳಲ್ಲಿ ಪಶ್ಚಿಮದ ರಾಜ್ಯಕ್ಕೆ ತೆರಳುವುದಾಗಿ ತಿಳಿಸಿದ್ದಾರೆ.

Join Whatsapp