ಹುಬ್ಬಳ್ಳಿ: ಭಾರತದ ಮೇಲೆ ಹಿಂದೂಗಳಷ್ಟೇ ಹಕ್ಕು ಮುಸ್ಲಿಂ ಸಮುದಾಯಕ್ಕಿದೆ. ದೇಶದಲ್ಲಿ ಎರಡೂ ಕೋಮುಗಳ ನಡುವೆ ಏನೆಲ್ಲಾ ವಿಷ ಬಿಜ ಬಿತ್ತಿದಾಗಲೂ ಕೂಡ, ಎರಡೂ ಕೋಮುಗಳು ಏಕತೆ ಕಾಪಾಡುವಲ್ಲಿ ಶ್ರಮ ವಹಿಸಿವೆ. ಹೀಗಾಗಿ ಮುಂದೆ ದೇಶಕ್ಕೆ ಒಳ್ಳೆಯ ಕಾಲ ಬರಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯ ಅಸಾರ ಮೊಹಲ್ಲಾದಲ್ಲಿ ಈದ್ ಮಿಲಾದ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಚಿವ ಸಂತೋಷ್ ಲಾಡ್ ಮಾತನಾಡಿದರು.
ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೆ ಮುಸ್ಲಿಂ ಸಮುದಾಯಕ್ಕೆ ಭೂಮಿಯ ಒಡೆತನ ಸಮಾನವಾಗಿ ಹಂಚಿಕೆಯಾಗಿಲ್ಲ. ಆದಾಗ್ಯೂ ದೇಶದ ಅಭೀವೃದ್ದಿ ಮತ್ತು ಇತರೆ ವಲಯಗಳಿಗೆ ಮುಸ್ಲಿಂ ಸಮುದಾಯದ ಕೊಡುಗೆಯನ್ನು ಕಡೆಗಣಿಸಲಾಗದು ಎಂದಿರುವ ಸಚಿವ ಸಂತೋಷ್ ಲಾಡ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರರಿಗೆ ರಾಜಕೀಯ ಮರುಜನ್ಮ ನೀಡಿದ್ದು ಅಂದಿನ ಮುಸ್ಲಿಂ ಲೀಗ್ ಪಕ್ಷ ಎಂದು ಇತಿಹಾಸದ ಕಥನವನ್ನು ನೆನಪು ಮಾಡಿಕೊಂಡರು.