ಕಡಬದಲ್ಲಿ ಯುವಕನಿಗೆ ಚೂರಿ ಇರಿತ: ಆಸ್ಪತ್ರೆಗೆ ದಾಖಲು

Prasthutha|

ಸುಳ್ಯ: ಯುವಕರ ತಂಡಗಳ ಮಧ್ಯೆ ವಾಗ್ವಾದ ಉಂಟಾಗಿ ಯುವಕನೊಬ್ಬನಿಗೆ ಚೂರಿ ಇರಿದು ಹಲ್ಲೆ ಮಾಡಿದ ಘಟನೆ ಕಡಬ ತಾಲೂಕಿನ ಆತೂರಿನಲ್ಲಿ ಆ.15 ರ ಸಂಜೆ ನಡೆದಿದೆ,

- Advertisement -

ಹಲ್ಲೆಗೊಳಗಾದ ಯುವಕನನ್ನು ಆತೂರು ಜನತಾ ಕಾಲೊನಿ ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

- Advertisement -

ಯುವಕನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Join Whatsapp