ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಕೇಸ್: ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳು ರಿಲೀಸ್

Prasthutha|

ಗೋದ್ರಾ: ಜೀವಾವಧಿ ಶಿಕ್ಷೆಗೊಳಗಾಗಿದ್ದ, 2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳು ಗುಜರಾತ್ ಸರ್ಕಾರದ ಪರಿಹಾರ ನೀತಿಯಡಿ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ..

- Advertisement -

ಈ ಬಗ್ಗೆ ಮಾತಾಡಿದ ಪಂಚಮಹಲ್ ಕಲೆಕ್ಟರ್ ಸುಜಲ್ ಮಾಯಾತ್ರಾ, ಕೆಲವು ತಿಂಗಳ ಹಿಂದೆ ಸರಕಾರದಿಂದ ರಚಿಸಲಾದ ಸಮಿತಿಯು, ಪ್ರಕರಣದ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ಪರವಾಗಿ ಸರ್ವಾನುಮತದ ನಿರ್ಧಾರವನ್ನು ಕೈಗೊಂಡಿತ್ತು. ಆ ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅದನ್ನು ಸರಕಾರ ಸ್ವೀಕರಿಸಿದೆ ಎಂದು ಹೇಳಿದರು

ಜನವರಿ 21, 2008 ರಂದು, ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

- Advertisement -

ಈ ಅಪರಾಧಿಗಳು 15 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದರು, ನಂತರ ಅವರಲ್ಲಿ ಒಬ್ಬರು ತಮ್ಮ ಅಕಾಲಿಕ ಬಿಡುಗಡೆಗಾಗಿ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.


ಅವರ ‘ಶಿಕ್ಷೆ ಮನ್ನಾ’ ವಿಚಾರವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು, ನಂತರ ಸರ್ಕಾರವು ಒಂದು ಸಮಿತಿಯನ್ನು ರಚಿಸಿದ್ದು, ಇದೀಗ ಆ ಸಮಿತಿಯ ಶಿಫಾರಸಿನ ಮೇಲೆ ಬಿಡುಗಡೆ ಮಾಡಲಾಗಿದೆ.

Join Whatsapp