ಉತ್ತರ ಪ್ರದೇಶ | ಮುಸ್ಲಿಮ್ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಗುಂಪು ಹತ್ಯೆ ಮಾಡಿದ ಹಿಂದುತ್ವ ಉಗ್ರರ ಪಡೆ!

Prasthutha|

ಮಾಧ್ಯಮಗಳ ‘ಉತ್ತಮ ಮುಖ್ಯಮಂತ್ರಿ’ಯಾಗಿರುವ ಯೋಗಿಯ ಉತ್ತರ ಪ್ರದೇಶ ಅಕ್ಷರಶಃ ಗೂಂಡಾಗಳ ಪಾಲಿಗೆ ಸ್ವರ್ಗದಂತಾಗಿದೆ. ರಾಜ್ಯದ ಬರೇಲ್ವಿ ಜಿಲ್ಲೆಯ ಅಯೋನ್ಲಾ ಗ್ರಾಮದಲ್ಲಿ ಹಿಂದುತ್ವ ಉಗ್ರರ ಪಡೆಯೊಂದು ಯುವಕನೋರ್ವನನ್ನು ಕಳ್ಳತನದ ಶಂಕೆಯಲ್ಲಿ ಮರಕ್ಕೆ ಕಟ್ಟಿ ಹಾಕಿ ಗುಂಪು ಹತ್ಯೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಸೆಪ್ಟಂಬರ್ 3ರ ರಾತ್ರಿ ನಡೆದಿದೆ. ಗುಂಪು ಹತ್ಯೆಗೊಳಗಾದ ಬಾಲಕನನ್ನು ಬಾಸಿತ್ ಎಂದು ಗುರುತಿಸಲಾಗಿದ್ದು, ಗುರುವಾರ ರಾತ್ರಿ ಉಗ್ರರ ಪಡೆಯಿಂದ ಹಲ್ಲೆಗೊಳಗಾದ ಬಾಸಿತ್ ಶುಕ್ರವಾರ ಸಂಜೆ ಬರೇಲ್ವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

- Advertisement -

ಪೊಲೀಸರ ಅನಾಗರಿಕ ವರ್ತನೆ!

ಉಗ್ರರ ಪಡೆಯಿಂದ ತೀವ್ರ ರೀತಿಯ ಹಲ್ಲೆಗೊಳಗಾಗಿದ್ದ ಬಾಸಿತ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ಅನಾಗರಿಕ ರೀತಿಯ ವರ್ತನೆ ತೋರಿದ ಯೋಗಿ ಸರಕಾರದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸುವ ಬದಲಿಗೆ ರಿಕ್ಷಾವೊಂದರಲ್ಲಿ ಕುಳ್ಳಿರಿಸಿಕೊಂಡು ಆತನ ಮನೆಗೆ ತಲುಪಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಾಸಿತ್ ನನ್ನು ಕುಟುಂಬಿಕರು ಬರೇಲ್ವಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾನೆ.

- Advertisement -

ಈ ನಡುವೆ ಘಟನೆಗೆ ಸಂಬಂಧಪಟ್ಟಂತೆ ಈಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವರಾದರೂ, ಅದಕ್ಕಿಂತ ಮೊದಲು ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಪಾಂಡೆ , “ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ, ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ಸಾವಿನ ಕಾರಣ ತಿಳಿಯಲಿದೆ” ಎಂದು ಹೇಳಿದ್ದರು. ಇದು 2019ರಲ್ಲಿ ಜಾರ್ಖಂಡಿನಲ್ಲಿ ತಬ್ರೇಝ್ ಅನ್ಸಾರಿ ಎನ್ನುವ ಯುವಕನನ್ನು ಇದೇ ರೀತಿ ಉಗ್ರರ ಪಡೆಗಳು ಗುಂಪು ಹತ್ಯೆ ನಡೆಸಿದಾಗಲೂ ಅಲ್ಲಿನ ಪೊಲೀಸರ ಹೇಳಿಕೆಗಳು ಇದೇ ರೀತಿಯಲ್ಲಿತ್ತು ಎಂಬುವುದನ್ನು ಗಮನಿಸಬೇಕಾಗಿದೆ. ಪೊಲೀಸರ ವರದಿಯ ಆಧಾರದಲ್ಲಿ ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಮರಣ ಹೊಂದಿದ್ದಾನೆ ಎಂದು ಆರೋಪಿಗಳನ್ನು ಮೊದಲು ಬಿಡಗಡೆಗೊಳಿಸಲಾಗಿತ್ತಾದರೂ, ನಂತರ ಪ್ರಕರಣದ ನೈಜತೆ ಹೊರಹಾಕುವಂತೆ ಒತ್ತಡ ಹೆಚ್ಚಾದಾಗ ಮರು ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಮೃತ ಬಾಸಿತ್ ತಾಯಿ ಪೊಲೀಸರ ವಾದವನ್ನು ನಿರಾಕರಿಸಿದ್ದು, “ಗುಂಪು ಮನರಂಜನೆಗಾಗಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರೇ ಆತನನ್ನು ಮನೆಗೆ ತಂದು ಬಿಟ್ಟು ಹೋಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಗ ಆತ ನೋವಿನಿಂದ ನರಳುತ್ತಿದ್ದ . ನಾವು ಕೂಡಲೇ ಆಸ್ಪತ್ರೆಗೆ ದಾಖಲಿಸಿದೆವು, ಆದರೆ ಮರುದಿನ ಆತ ಮೃತಪಟ್ಟ” ಎಂದು ಹೇಳುತ್ತಾರೆ.

ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸುವ ವೀಡಿಯೋ ಒಂದನ್ನು ಆಸಿಫ್ ಖಾನ್ ಎಂಬವರು ಟ್ವೀಟ್ ಮಾಡಿದ್ದಾರೆ



Join Whatsapp