ಫೆಲೆಸ್ತೀನ್‌ ಪರ ಫೇಸ್‌ ಬುಕ್‌ ಪೋಸ್ಟ್‌ | ಮುಸ್ಲಿಂ ಯುವಕನ ಬಂಧನ

Prasthutha|

ಲಖನೌ : ಉತ್ತರ ಪ್ರದೇಶದ ಅಝಂಗಡದ ಸರೈಮೀರ್‌ ಪಟ್ಟಣದ 32ರ ಹರೆಯದ ಯಾಸೀರ್‌ ಅರಾಫತ್‌ ಎಂಬ ಯುವಕ ಫೆಲೆಸ್ತೀನ್‌ ಪರ ಹಾಕಿದ್ದ ಫೇಸ್‌ ಬುಕ್‌ ಪೋಸ್ಟ್‌ ಗೆ ಸಂಬಂಧಿಸಿ ಆತನನ್ನು ಬಂಧಿಸಿ, ಬಿಡುಗಡೆಗೊಂಡಿದ್ದಾನೆ.

- Advertisement -

ಯಾಸೀರ್‌ ಮೇ 19ರಂದು ತನ್ನ ಫೇಸ್‌ ಬುಕ್‌ ಪೇಜ್‌ ನಲ್ಲಿ ಗಾಝಾದಲ್ಲಿ ಇಸ್ರೇಲಿಗರಿಂದ ಫೆಲೆಸ್ತೀನಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿ ಪೋಸ್ಟ್‌ ಒಂದನ್ನು ಹಾಕಿದ್ದ. ಅವರ ಈ ಪೋಸ್ಟ್‌ ಅನ್ನು ಭಾರತದ ಇಸ್ರೇಲ್‌ ಪರ ಬೆಂಬಲಿಗರು ಟ್ರೋಲ್‌ ಮಾಡಿದ್ದಲ್ಲದೆ, ಮರುದಿನ ಮುಂಜಾನೆ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಮೇ 21ರಂದು ಸಂಜೆ ಯಾಸೀರ್‌ ಗೆ ಜಾಮೀನು ದೊರಕಿ, ಬಿಡುಗಡೆಗೊಂಡಿದ್ದಾನೆ. ಆದರೆ, ಫೆಲೆಸ್ತೀನ್‌ ಪರ ಪೋಸ್ಟ್‌ ಗಾಗಿ ಮುಸ್ಲಿಮ್‌ ಯುವಕನ ಬಂಧಿಸಿರುವ ಪೊಲೀಸರ ವರ್ತನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಪೊಲೀಸರ ಇಸ್ಲಾಮಾಫೋಬಿಯಾ ಮನಸ್ಥಿತಿಯನ್ನು ತೋರಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.  



Join Whatsapp