ಪ್ಯಾರಿಸ್: ಮುಸ್ಲಿಮ್ ಮಹಿಳೆಯರ ಮೇಲೆ ಜನಾಂಗೀಯ ದಾಳಿ: ಚಾಕುವಿನಿಂದ ತಿವಿತ

Prasthutha|

ಪ್ಯಾರಿಸ್: ಕಳೆದ ವಾರ ಪ್ಯಾರಿಸ್ ನಲ್ಲಿ ಶಿಕ್ಷಕರೊಬ್ಬರ ಶಿರಚ್ಛೇದನದ ಬಳಿಕ ಪ್ಯಾರಿಸ್ ನಲ್ಲಿ ಉದ್ವಿಗ್ನತೆಯು ಹೆಚ್ಚಿದ್ದು, ಇಲ್ಲಿನ ಎಫೆಲ್ ಟವರ್ ನ ಅಡಿಯಲ್ಲಿ ಇಬ್ಬರು ಅಲ್ಜೀರಿಯನ್  ಮುಸ್ಲಿಮ್ ಮಹಿಳೆಯರನ್ನು ಅಡಿಯಲ್ಲಿ ನಿನ್ನೆ ಚಾಕುವಿನಿಂದ ತಿವಿದು ಗಾಯಗೊಳಿಸಲಾಗಿದೆ.

ನೀವು ಕೊಳಕು ಅರಬ್ಬರು ಎನ್ನುತ್ತಾ ದಾಳಿಕೋರರು ಹಲ್ಲೆ ನಡೆಸಿದ್ದು, ಈ ಜನಾಂಗೀಯ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಶಂಕಿತರನ್ನು ಬಂಧಿಸಲಾಗಿದೆ.

- Advertisement -

ಬಂಧಿತರನ್ನು ಯುರೋಪ್ ಚಹರೆಯ ಬಿಳಿಯರೆಂದು ಬಣ್ಣಿಸಲಾಗಿದ್ದು, ಅವರು ಕೊಲೆ ಯತ್ನ ಆರೋಪವನ್ನು ಎದುರಿಸುತ್ತಿದ್ದಾರೆ.

ಕಳೆದ ವಾರ ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡಿ ವ್ಯಂಗ್ಯ ಚಿತ್ರ ರಚಿಸಿದ ಸ್ಯಾಮುಯಲ್ ಪ್ಯಾಟಿ ಎಂಬ 47ರ ಹರೆಯದ ಶಿಕ್ಷಕನ ಹತ್ಯೆಯ ಬಳಿಕ ಈ ದಾಳಿ ನಡೆದಿದೆ. ದಾಳಿಯಲ್ಲಿ ಕೆಂಝಾ ಮತ್ತು ಅಮೆಲ್ ಎಂಬ ಮಹಿಳೆಯರು ಗಾಯಗೊಂಡಿದ್ದಾರೆ.

- Advertisement -