ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ ಮುಸ್ಲಿಂ ಒಕ್ಕೂಟ ಉಳ್ಳಾಲ(ರಿ)

Prasthutha|

ಮಂಗಳೂರು: ಸಮಾಜದಲ್ಲಿ ಬಹಿರಂಗವಾಗಿ ಕೊಲೆ ದೊoಬಿ ಅರಾಜಕತೆ ಸೃಷ್ಟಿಸಲು ಯುವಕರನ್ನು ಪ್ರಚೋದಿಸಿ ಸಮಾಜದಲ್ಲಿ  ರಕ್ತಪಾತಕ್ಕೆ ಕರೆ ಕೊಡುವ ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಸ್ಲಿಂ ಒಕ್ಕೂಟ ಉಳ್ಳಾಲ (ರಿ) ವತಿಯಿಂದ ಉಳ್ಳಾಲ  ಪೊಲೀಸ್ ಠಾಣಾಧಿಕಾರಿಗಳ ಮುಖಾಂತರ, ಮಾನ್ಯ ಕರ್ನಾಟಕದ ರಾಜ್ಯಪಾಲರ ಅರ್ಜಿ ಸಲ್ಲಿಸಲಾಯಿತು.

- Advertisement -

ಇತ್ತೀಚಿಗೆ ವಿಶ್ವಹಿಂದು ಪರಿಷತ್ ನ ವತಿಯಿಂದ  ತುಮಕೂರು  ಮತ್ತು ಉಳ್ಳಾಲದಲ್ಲಿ ನಡೆಸಲಾದ ಶೌರ್ಯ ದಿನಾಚರಣೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಶರಣ್ ಪಂಪ್ ವೆಲ್ ಎಂಬ ಗೂಂಡಾ,  ಸಮಾಜದ ಯುವಕರನ್ನು ದಾರಿತಪ್ಪಿಸಿ ಸಮಾಜದಲ್ಲಿ ಅಶಾಂತಿ ಹರಡಿಸಿ ಕೊಲೆ  ದೊoಬಿ ನಡೆಸಲು ಪ್ರಚೋದಿಸಿದಲ್ಲದೆ  ಅದಕ್ಕೆ ಉದಾಹರಣೆಯಾಗಿ 2000 ಮುಸ್ಲಿಂ ಜನರನ್ನು  ಗುಜರಾತಿನಲ್ಲಿ ಸಂಹಾರ ಮಾಡಿದ್ದೇವೆ.

ಹಾಗೆಯೇ ಸುರತ್ಕಲ್ ನಲ್ಲಿ ಜನರ ಮುಂದೆಯೇ ಫಾಝಿಲ್ ಎಂಬ ಯುವಕನನ್ನು ಕೊಂದಿದ್ದೇವೆ. ಮುಂದಕ್ಕೆ ಹೀಗೇನೇ ಕೊಲ್ಲುವೆವು ಮತ್ತು ಹೊಡೆಯುವೆವು ಎಂದು ಬಹಿರಂಗವಾಗಿ  ಮುಸ್ಲಿಂ ಸಮುದಾಯಕ್ಕೆ ಕೊಲೆ ಬೆದರಿಕೆಯೊಡ್ಡಿದ್ದಾನೆ.ಈತ ಈ ಹಿಂದೆಯೂ ಇದೇ ತರಹದ ಉದ್ರೇಕಕಾರಿ ಭಾಷಣ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

- Advertisement -

ಶರಣ್ ಪಂಪ್ ವೆಲ್ ಎಂಬ ಈ ಉಗ್ರ  ಹೀಗೆ ಭಾಷಣ ಮಾಡಿ ತನ್ನ ಮಾತೃ  ಸಂಘಟನೆಯಾದ ಆರ್ ಎಸ್ ಎಸ್ ನೇತಾರರಿಗೆ ತಾನು ಶಕ್ತನಾಗಿದ್ದೇನೆ ಎಂದು ತೋರಿಸಿಕೊಡಲು  ಈ ರೀತಿಯ  ಕೃತ್ಯಗಳನ್ನು  ಎಸೆಗುತ್ತಿದ್ದಾನೆ.ಈತನ   ಬೆದರಿಕೆಗಳಿಂದ  ರಾಜ್ಯದಲ್ಲಿ ಇನ್ನಷ್ಟು ಹತ್ಯೆಗಳು ಗುಂಪು ಹತ್ಯೆ ಯoತಹ ಘಟನೆಗಳು ಸಂಭವಿಸಿ ಇನ್ನೆಷ್ಟು ನಾಗರಿಕರು ಬಲಿಯಾಗುವುದರಲ್ಲಿ ಸಂಶಯವಿಲ್ಲ. ಈತನಿಗೆ  ಧೈರ್ಯ ಕೊಡುವವರು ಹಲವಾರು ಜನರಿದ್ದು,ಹಾಗೇನೇ ಸಂಘಟನೆಗಳು ಇರುವುದರಿಂದ ಈ ರೀತಿ   ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾನೆ. ಆದ್ದರಿಂದ ತಾವುಗಳು ಈತನನ್ನು ಕೂಡಲೇ ಕಠಿಣ ಕಾನೂನು ಕ್ರಮದಲ್ಲಿ ಬಂಧಿಸಿ ತನಿಖೆಗೊಳಿಸಬೇಕು ಮತ್ತು ದ. ಕ. ಜಿಲ್ಲೆಯಲ್ಲಿ ಈ ತರ  ನಡೆದ ಕೊಲೆಗಳು ಮತ್ತು ಗಲಭೆಗಳಲ್ಲಿ ಈತನ ಶಾಮಿಲಾತಿ ಇರುವುದನ್ನು ತನಿಖೆಗೊಳಿಸಬೇಕು ಮತ್ತು ಈತನನ್ನು ರಾಜ್ಯದಿಂದಲೇ ಗಡಿಪಾರು ಮಾಡಿ ರಾಜ್ಯದ ನೆಮ್ಮದಿ  ಶಾಂತಿಗೆ ಸಹಕಾರಿಯಾಗುವಂತೆ ಕೂಡಲೇ ಕ್ರಮ ಜರಗಿಸಬೇಕೆಂದು ಈ ಮೂಲಕ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ  ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಮುಸ್ಲಿಂ ಒಕ್ಕೂಟ ಉಳ್ಳಾಲ(ರಿ) ಇದರ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ, ಉಪಾಧ್ಯಕ್ಷ ಹನಿಫ್ ಮಾರ್ಗತಲೆ ಕಾರ್ಯದರ್ಶಿ ಸಬೀಲ್ ಅಹ್ಮದ್, ಸದಸ್ಯರುಗಳಾದ ಹಸನ್ ಉಳ್ಳಾಲ, ಖಲೀಲ್ ಖಿಲ್ರಿಯಾ,ಇಕ್ಬಾಲ್  ಕೆನರಾ ಉಪಸ್ಥಿತರಿದ್ದರು.

Join Whatsapp