ಮುಸ್ಲಿಮರ ಹತ್ಯೆಯ ಸಮರ್ಥನೆ: ಶರಣ್ ಪಂಪ್’ವೆಲ್ ವಿರುದ್ಧ FIR

Prasthutha|

ತುಮಕೂರು: ಫಾಝಿಲ್ ಕೊಲೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ತುಮಕೂರು ಜಿಲ್ಲೆಯ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್’ಐಆರ್ ದಾಖಲು ಮಾಡಲಾಗಿದೆ.
SDPI ಜಿಲ್ಲಾ ಸಮಿತಿ ಸದಸ್ಯ ಮುಕ್ತಿಯಾರ್ ಅಹ್ಮದ್ ಹಾಗೂ ಸಾಮಾಜಿಕ ಕಾರ್ಯಕರ್ತ ಸಯ್ಯದ್ ಬುರ್ಹಾನ್ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ಫಾಝಿಲ್ ಹತ್ಯೆ ಮಾಡಿಸಿದ್ದು ನಾವೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿ, ಮೈಸೂರಿನ ಜೈಲಿನಲ್ಲಿ ಹತ್ಯೆ ಮಾಡಿದ್ದು ಎದೆಗಾರಿಕೆ’ ಎಂದು ಕೊಲೆಯ ಸಮರ್ಥನೆ ಮಾಡುತ್ತಾ ತಮ್ಮ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇರುವುದೇ ಮುಸ್ಲಿಮರ ನರಮೇಧ ನಡೆಸಲು ಎಂಬ ರೀತಿಯಲ್ಲಿ ಬಹಿರಂಗ ಭಾಷಣ ಮಾಡಿ ಭಯದ ವಾತಾವರಣ ಸೃಷ್ಟಿಸಿ ವಿಧ್ವಂಸಕ ಕೃತ್ಯಗಳನ್ನು ಶರಣ್ ಪಂಪ್ ವೆಲ್ ನಡೆಸಿದ್ದಾರೆ. ಪ್ರಚೋದಾತ್ಮಕ ಭಾಷಣ ಮಾಡಿ, ಕಾನೂನು ಬಾಹಿರ ಚಟುವಟಿಕೆಗಳನ್ನು ಯೋಜನಬದ್ಧವಾಗಿ ನಡೆಸಿ ನಿರ್ದಿಷ್ಟ ಸಮುದಾಯದ ಜನರಲ್ಲಿ ಭಯ ಹುಟ್ಟಿಸಿ ಸಮಾಜದಲ್ಲಿ ಅಶಾಂತಿ, ಹಿಂಸೆ, ಭಯೋತ್ಪಾದಿಸುವ ಕೃತ್ಯಗಳಲ್ಲಿ ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ತಾನು ನೇರವಾಗಿ ಪಾಲ್ಗೊಂಡಿರುವುದರ ಕುರಿತು ಬಹಿರಂಗವಾಗಿಯೇ ಶರಣ್ ಪಂಪ್ ವೆಲ್ ಘೋಷಿಸಿದ್ದಾರೆ. ಆದ್ದರಿಂದ ಈ ಭಾಷಣದ ತುಣುಕುಗಳು ರಾಜ್ಯದ ಪ್ರತಿಷ್ಠಿತ ಮಧ್ಯಮಗಳಲ್ಲಿ ಪ್ರಸಾರವಾಗಿ ಇಡೀ ರಾಜ್ಯದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಕೋಮು ಸಂಘರ್ಷ ಉಂಟಾಗುವ ಸಾಧ್ಯತೆ ಸಹ ಇದೆ. ಸಾರ್ವಜನಿಕ ಸಭೆ ಆಯೋಜಿಸಿ ನೇರವಾಗಿ ಹಿಂಸೆ, ಗಲಭೆ, ಅಪರಾಧ ಕೃತ್ಯಗಳ ಸಮರ್ಥನೆ ಮತ್ತು ಸಂಘಟಿತ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಘಂಟಾಘೋಷವಾಗಿ ಹೇಳಿಕ ನೀಡಿರುವ ವಿಶ್ವ ಹಿಂದೂ ಪರಿಷದ್, ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಮುಕ್ತಾರ್ ಅಹ್ಮದ್ ಅವರು ದೂರಿನಲ್ಲಿ ಒತ್ತಾಯಿಸಿದ್ದರು.

ಮುಕ್ತಾರ್ ಅಹ್ಮದ್ ಮತ್ತು ಬುರ್ಹಾನುದ್ದೀನ್ ನೀಡಿದ್ದ ದೂರುಗಳನ್ನು ಒಟ್ಟಾಗಿ ಪರಿಗಣಿಸಿ ತಿಲಕ್ ನಗರ ಪೊಲೀಸರು ಎಫ್’ಐಆರ್ ದಾಖಲಿಸಿದ್ದಾರೆ.

Join Whatsapp