29 ವರ್ಷಗಳ ಬಳಿಕ ಕೇರಳದ ಮುಸ್ಲಿಂ ದಂಪತಿಯ ಮರು ಮದುವೆ: ಕಾರಣ ಗೊತ್ತೇ?

Prasthutha|

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆ, ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಒಂದು ವಿಶಿಷ್ಟವಾದ ಮದುವೆಗೆ ಸಾಕ್ಷಿಯಾಗಲಿದೆ.

- Advertisement -


ತಮ್ಮ ಮೂವರು ಹೆಣ್ಣು ಮಕ್ಕಳನ್ನು ಆಸ್ತಿಯ ಅಧಿಕೃತ ವಾರಸುದಾರರಾಗಿಸಲು 29 ವರ್ಷಗಳ ಬಳಿಕ ದಂಪತಿ ಮರು ಮದುವೆ ಆಗುತ್ತಿದ್ದಾರೆ.


ನಾಳೆ ಮದುವೆಯು ಹೊಸದುರ್ಗ ಸಬ್ ರಿಜಿಸ್ಟ್ರಾರ್’ ಅವರ ಸಮ್ಮುಖದಲ್ಲಿ, ತಮ್ಮ ಮೂವರು ಹೆಣ್ಣು ಮಕ್ಕಳು, ತಮ್ಮ ಕುಟುಂಬದವರು ಹಾಗೂ ಮಿತ್ರರ ಸಮ್ಮುಖದಲ್ಲಿ ಈ ಮರು ಮದುವೆ ನಡೆಯುತ್ತಿದೆ.
ಕಾಸರಗೋಡಿನ ವಕೀಲ ಸಿ. ಶುಕೂರ್ ಅವರು 1994ರ ಅಕ್ಟೋಬರ್ ನಲ್ಲಿ ಡಾ. ಶೀನಾ ಅವರ ಜೊತೆಗೆ ಮದುವೆಯಾಗಿದ್ದರು. ಭಾರತೀಯ ಯೂನಿಯನ್ ಮುಸ್ಲಿಂ ಲೀಗಿನ ನಾಯಕರಾದ ಪಾನಕ್ಕಾಡ್ ಸಯ್ಯದ್ ಹೈದರ್ ಅಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ಆ ಮದುವೆ ನಡೆದಿತ್ತು.

- Advertisement -


ಆದರೆ ಮದುವೆ ಶರಿಯಾ ಕಾನೂನಿನಂತೆ ಆಗಿತ್ತು. ಅದರ ಪ್ರಕಾರ ಮತ್ತು ಅದರ ವ್ಯಕ್ತಿಗತ ಕಾನೂನಿನ ಪ್ರಕಾರ, ತಂದೆ ಸಂಪಾದಿಸಿದ ಆಸ್ತಿಯ ಮೂರನೆಯ ಎರಡು ಭಾಗ ಮಾತ್ರ ಮಕ್ಕಳಿಗೆ ಹೋದರೆ ಉಳಿದದ್ದು ತಂದೆಯ ಸಹೋದರರಿಗೆ ಹೋಗುತ್ತಿತ್ತು.


ಈಗ ದಂಪತಿಯು ತಮ್ಮ ಕಷ್ಟದ ಸಂಪಾದನೆಯ ಎಲ್ಲ ಆಸ್ತಿಯೂ ತಮ್ಮ ಮಕ್ಕಳಿಗೇ ಸಿಗಬೇಕು ಎಂಬ ಕಾರಣಕ್ಕೆ ವಿಶೇಷ ಮದುವೆ ಕಾಯ್ದೆಯಡಿ ಮರು ಮದುವೆ ಆಗುತ್ತಿದ್ದಾರೆ. ಅದರಂತೆ ಅವರ ಹೆಣ್ಣು ಮಕ್ಕಳೇ ತಮ್ಮ ಹೆತ್ತವರ ಎಲ್ಲ ಆಸ್ತಿಯ ವಾರಸುದಾರರಾಗುವುದು ಸಾಧ್ಯವಾಗಲಿದೆ.


ಡಾ. ಶೀನಾ ಅವರು ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಉಪಕುಲಪತಿಯೂ ಹೌದು.

Join Whatsapp