ಬಿಜೆಪಿ ಶಾಸಕ ಮಾಡಾಳ್’ನನ್ನು ಹುಡುಕಿ ಕೊಡಿ: ಪೋಸ್ಟರ್ ಅಂಟಿಸಿರುವ ಕಾಂಗ್ರೆಸ್

Prasthutha|

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದು, ಇನ್ನೂ ಪೊಲೀಸರು ಬಂಧನ ಮಾಡಿಲ್ಲ. ಇದರ ಕುರಿತು ಯುವ ಕಾಂಗ್ರೆಸ್ ಪೋಸ್ಟರ್ ಗಳನ್ನು ಮುದ್ರಿಸಿ ಬೆಂಗಳೂರಿನ ಹಲವೆಡೆ ಅಂಟಿಸಿದೆ.

- Advertisement -


ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ. ಅವರ ಎತ್ತರ, ವಯಸ್ಸಿನ ಮಾಹಿತಿ ಜತೆಗೆ, ಕೊನೆಯದಾಗಿ ಕಾಣಿಸಿಕೊಂಡಿದ್ದು ಸಿಎಂ ಕಚೇರಿ ಎಂದು ನಮೂದಿಸಲಾಗಿದೆ.


ಲೋಕಾಯುಕ್ತ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊದಲನೇ ಆರೋಪಿಯನ್ನು ದಯಮಾಡಿ ಹುಡುಕಿಕೊಡಿ; ಅಸಮರ್ಥ 40% ಸರ್ಕಾರ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

Join Whatsapp