ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೋಲಾ ಪಟ್ಟಣದಲ್ಲಿ ನಾಲ್ವರು ಅಪರಿಚಿತರು ಮುಸ್ಲಿಮ್ ಧಾರ್ಮಿಕ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.
ಮೃತರನ್ನು ಖ್ವಾಜಾ ಸಯ್ಯದ್ ಚಿಶ್ತಿ (35) ಎಂದು ಗುರುತಿಸಲಾಗಿದೆ. ಯೋಲಾದಲ್ಲಿ ಸೂಫಿ ಬಾಬಾ ಎಂಬ ಹೆಸರಿನಿಂದ ಅವರು ಖ್ಯಾತರಾಗಿದ್ದರು. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮುಂಬೈನಿಂದ 200 ಕಿ.ಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದ ತೆರೆದ ಪ್ಲಾಟ್ ನಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಅವರ ಹಣೆಗೆ ಬಂದೂಕಿನಿಂದ ಗುಂಡು ಹಾರಿಸಿದ್ದು, ನಂತರ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಪ್ರಜೆ ಸೂಫಿ ಬಾಬಾ ಅವರನ್ನು ಹತ್ಯೆಗೈದ ಬಳಿಕ ದಾಳಿಕೋರರು ಅವರು ಬಳಸಿದ ಎಸ್ಯುವಿ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಯೆಯೋಲಾ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.