ಮಂಗಳೂರು | ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತ: ರಸ್ತೆ, ಧರೆ ಕುಸಿತ

Prasthutha|

►ದುಬೈ, ದಮಾಮ್ ನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ, ಬೆಂಗಳೂರಿಗೆ ಡೈವರ್ಟ್

- Advertisement -

ಮಂಗಳೂರು: ಕೆಲ ದಿನಗಳಿಂದ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇಂದು ಬೆಳಗ್ಗೆಯಿಂದ ಮಳೆ ಕೊಂಚ ಬಿಡುವು ನೀಡಿದೆ. ಉಳ್ಳಾಲದ ಉಚ್ಚಿಲ ಬಟಪಾಡಿಯಲ್ಲಿ 1 ಕಿ.ಮೀ ದೂರದವರೆಗಿನ ರಸ್ತೆ ಸಮುದ್ರ ಪಾಲಾಗಿದೆ.
ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

- Advertisement -


ಭಾರೀ ಮಳೆಗೆ ಕಾಸರಗೋಡು-ವಿಟ್ಲ ಹೆದ್ದಾರಿಯ ಸಾರಡ್ಕ ಎಂಬಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಅದ್ಯಪಾಡಿಗೆ ಸಂಚರಿಸುವ ಜಿಲ್ಲಾ ರಸ್ತೆಯಲ್ಲಿ ಗುಡ್ಡ ಕುಸಿಯುತ್ತಿದ್ದು, ರಸ್ತೆ ಬಂದ್ ಮಾಡಲಾಗಿದೆ.
ಮೂಡಬಿದಿರೆಯಲ್ಲಿ ಧರೆ ಕುಸಿದು ಕಾರುಗಳಿಗೆ ಹಾನಿಯಾದ ಘಟನೆ ನಡೆದಿದ್ದು, ಇಲ್ಲಿನ ಮೈಟ್ ಕಾಲೇಜು ಕಟ್ಟಡದ ಬಳಿ ಧರೆ ಕುಸಿದಿದ್ದು, ವಿದ್ಯಾರ್ಥಿಗಳ ಮೂರು ಕಾರುಗಳು ಜಖಂಗೊಂಡಿವೆ.


ಭಾರಿ ಮಳೆಗೆ ನಿನ್ನೆ ಮಂಗಳೂರಿಗೆ ಬರಬೇಕಿದ್ದ ಎರಡು ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ದುಬೈ ಮತ್ತು ದಮಾಮ್ ನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ ಮಂಗಳೂರಿನಲ್ಲಿ ಇಳಿಯಲಾಗದೆ, ಬೆಂಗಳೂರಿಗೆ ಡೈವರ್ಟ್ ಮಾಡಲಾಗಿತ್ತು.
ಮಡಿಕೇರಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮದೆನಾಡು ಎಂಬಲ್ಲಿಂದ ಜೋಡುಪಾಲಕ್ಕೆ ಹೋಗುವ ರಸ್ತೆಯ ಮಧ್ಯ ಭಾಗದಲ್ಲಿ ಗುಡ್ಡ ಕುಸಿದಿದ್ದು ಎನ್ ಡಿಆರ್ ಎಫ್ ತಂಡವು ಜೆಸಿಬಿ ಮುಖಾಂತರ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.



Join Whatsapp