ಇಸ್ರೇಲ್‌ ಮೈತ್ರಿಕೂಟದಲ್ಲಿ ಭಾಗಿಯಾದ ಪಕ್ಷದ ಜೊತೆಗೆ ನಂಟು ನಿರಾಕರಿಸಿದ ಮುಸ್ಲಿಂ ಬ್ರದರ್‌ಹುಡ್

Prasthutha|

ಜೆರುಸಲೇಂ : ರಅಮ್‌ ಅಥವಾ ಅರಬ್‌ ಯುನೈಟೆಡ್‌ ಲಿಸ್ಟ್‌ ಮುಖ್ಯಸ್ಥ ಎಂ.ಕೆ. ಮನ್ಸೋರ್‌ ಅಬ್ಬಾಸ್‌ ಜೊತೆಗೆ ಯಾವುದೇ ನಂಟಿಲ್ಲ ಎಂದು ಮುಸ್ಲಿಂ ಬ್ರದರ್‌ ಹುಡ್‌ ಸ್ಪಷ್ಟಪಡಿಸಿದೆ ಎಂದು ʼಅಲ್-ವತನ್‌ ವಾಯ್ಸ್‌ʼ ವರದಿ ಮಾಡಿದೆ.

“ಸಾಕಷ್ಟು ಮಾಧ್ಯಮ ವರದಿಗಳು ಚಳವಳಿ (ರಅಮ್)‌ ಜೊತೆಗೆ ಮುಸ್ಲಿಂ ಬ್ರದರ್‌ಹುಡ್‌ ಯಾವುದೇ ಸೈದ್ಧಾಂತಿಕ ಅಥವಾ ಸಂಘಟನಾತ್ಮಕ ಸಂಬಂಧ ಹೊಂದಿಲ್ಲʼʼ ಎಂದು ಮುಸ್ಲಿಂ ಬ್ರದರ್‌ ಹುಡ್‌ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ತಿಳಿಸಿದೆ.

- Advertisement -

ಇಸ್ಲಾಮಿಕ್‌ ಚಳವಳಿಯ ಹೆಸರಲ್ಲಿ ಚುನಾವಣೆಯಲ್ಲಿ ನಾಲ್ಕು ಸ್ಥಾನ  ಗೆದ್ದು, ಇಸ್ರೇಲಿನ ಸಂಸತ್‌ ಚುನಾವಣೆಯಲ್ಲಿ ಭಾಗವಹಿಸಿದ ಈ ವ್ಯಕ್ತಿ(ಮನ್ಸೋರ್‌ ಅಬ್ಬಾಸ್) ಜೊತೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

- Advertisement -