ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ

Prasthutha|

ನೆಲ್ಯಾಡಿ ಸೀನಿಯರ್ ಛೇಂಬರ್ ನ ವತಿಯಿಂದ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

- Advertisement -

 ಈ ವೇಳೆ ಮಾತನಾಡಿದ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸಂಚಾಲಕರು ಮತ್ತು ನೆಲ್ಯಾಡಿ ಸೀನಿಯರ್ ಛೇಂಬರ್ ನ ಸ್ಥಾಪಕಾಧ್ಯಕ್ಷರಾದ ಅಬ್ರಹಾಂ ವಗೀಸರ್, ಪರಿಸರ ಸಂರಕ್ಷಣೆ ನಮ್ಮೆಲ್ಲರ ‌ಹೊಣೆಯಾಗಿದೆ, ಇಂದಿನ ಕಾಲಮಾನದಲ್ಲಿ ಪರಿಸರದ ಉಳಿವಿನ ಕಡೆಗೆ ಹೆಚ್ಚು ‌ಹೆಚ್ಚು ಒತ್ತು ನೀಡಬೇಕು, ಪ್ರತಿ ವರ್ಷ ಪರಿಸರ ದಿನದಂದು ಕೇವಲ ಸಂಕೇತವಾಗಿ ಗಿಡನೆಡುವುದು ಆಗಬಾರದು, ನೆಟ್ಟ ಗಿಡಗಳನ್ನು ಪೋಷಿಸಬೇಕು ಆಗ ಮಾತ್ರ ಆಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದ್ದಾರೆ.   

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ” ಪರಿಸರ ಸಂರಕ್ಷಣೆ ಮತ್ತು ಕೊರೋನ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪ್ರೈಮರಿ ವಿದ್ಯಾರ್ಥಿ ಗಳಿಗೆ “ಪರಿಸರ ಸಂರಕ್ಷಣೆ” ವಿಷಯದ ಮೇಲೆ ಚಿತ್ರಕಲೆ  ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸುಮಾರು 80 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಮೃತ ರಾಜೇಂದ್ರ ಹೆಗಡೆ, ಶ್ರೀ ಮಾರಿಕಾಂಭ ಸರಕಾರಿ ಪೌಢಶಾಲೆ , ಶಿರಸಿ, ದ್ವಿತೀಯ ಬಹುಮಾನ ವನ್ನು ಶರಮಣ್ಯ ಎಸ್ ಅಚಾರ್ಯ, ಜೈನ್ ಹೈಸ್ಕೂಲ್ ಮೂಡುಬಿದಿರೆ ಹಾಗೂ ಮಾನ್ಯ ಆರ್. ಜೆ, ಸರಕಾರಿ ಪ್ರೌಢಶಾಲೆ ಉಜಿರೆ, ಚಿತ್ರಕಲೆಯಲ್ಲಿ ಪ್ರಥಮ ಸ್ಧಾನ ಜೆಸ್ವಿತ್ ತೋಟ, ಸೈಂಟ್ ಅ್ಯನಸ್ ಕಡಬ, ದ್ವಿತೀಯ ಸ್ಧಾನ ಶ್ರವಣ್ ಸರಸ್ವತಿ ವಿದ್ಯಾಕೇಂದ್ರ ಕಡಬ ಪಡೆದುಕೊಂಡಿದೆ.

- Advertisement -

ಕಾರ್ಯಕ್ರಮದಲ್ಲಿ ನೆಲ್ಯಾಡಿ ‌ಸೀನಿಯರ್ ಛೇಂಬರ್ ನ ಅಧ್ಯಕ್ಷ ರಾದ ಡಾ. ಸದಾನಂದ ಕುಂದರ್, ಕಾರ್ಯ ದಶಿ ಪ್ರಶಾಂತ ಸಿ.ಎಚ್, ಕೋಶಾಧಿಕಾರಿ ವೆಂಕಟರಮಣ ‌ಅರ್, ಕಾಲೇಜಿನ ಪ್ರಾಂಶುಪಾಲರಾದ ಏಲಿಯಸ್, ಮುಖ್ಯಗುರುಗಳಾದ ತೋಮಸ್, ಹಾಗೂ ಸದಸ್ಯರಾದ ವಿಶ್ವನಾಥ ರೈ ಉಪಸ್ಥಿತರಿದ್ದರು

Join Whatsapp