ಜೆರುಸಲೇಂ : ರಅಮ್ ಅಥವಾ ಅರಬ್ ಯುನೈಟೆಡ್ ಲಿಸ್ಟ್ ಮುಖ್ಯಸ್ಥ ಎಂ.ಕೆ. ಮನ್ಸೋರ್ ಅಬ್ಬಾಸ್ ಜೊತೆಗೆ ಯಾವುದೇ ನಂಟಿಲ್ಲ ಎಂದು ಮುಸ್ಲಿಂ ಬ್ರದರ್ ಹುಡ್ ಸ್ಪಷ್ಟಪಡಿಸಿದೆ ಎಂದು ʼಅಲ್-ವತನ್ ವಾಯ್ಸ್ʼ ವರದಿ ಮಾಡಿದೆ.
“ಸಾಕಷ್ಟು ಮಾಧ್ಯಮ ವರದಿಗಳು ಚಳವಳಿ (ರಅಮ್) ಜೊತೆಗೆ ಮುಸ್ಲಿಂ ಬ್ರದರ್ಹುಡ್ ಯಾವುದೇ ಸೈದ್ಧಾಂತಿಕ ಅಥವಾ ಸಂಘಟನಾತ್ಮಕ ಸಂಬಂಧ ಹೊಂದಿಲ್ಲʼʼ ಎಂದು ಮುಸ್ಲಿಂ ಬ್ರದರ್ ಹುಡ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಇಸ್ಲಾಮಿಕ್ ಚಳವಳಿಯ ಹೆಸರಲ್ಲಿ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆದ್ದು, ಇಸ್ರೇಲಿನ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿದ ಈ ವ್ಯಕ್ತಿ(ಮನ್ಸೋರ್ ಅಬ್ಬಾಸ್) ಜೊತೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.