ಸಿಂಧಗಿಯಲ್ಲಿ ಮುಸ್ಲಿಮ್ ಆಟೋ ಚಾಲಕನ ಬರ್ಬರ ಹತ್ಯೆ

Prasthutha|

ಸಿಂಧಗಿ : ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಮುಸ್ಲಿಮ್ ಆಟೋ ಚಾಲಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಕೊಲೆಯಾದ ಯುವಕನನ್ನು ಶಿವಶಂಕರ ಬಡಾವಣೆಯ ನಿವಾಸಿ ಆಸಿಫ್ ಮೆಹಬೂಬ್ ಜಿನಾವರ್ ಎಂದು ಗುರುತಿಸಲಾಗಿದೆ. ನಗರದ ಜೇವರ್ಗಿ ರಸ್ತೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ.

- Advertisement -

ನಿನ್ನೆ ತಡರಾತ್ರಿ ಕೆಲಸ ಮುಗಿಸಿಕೊಂದು ಮನೆಗೆ ವಾಪಾಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಹತ್ಯೆ ನಡೆಸಿದ್ದು, ಆಟೋದಲ್ಲೇ ಆಸಿಫ್ ಮೆಹಬೂಬ್ ಅವರನ್ನು ಕೊಚ್ಚಿ ಕೊಲೆ ನಡೆಸಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಪ್ರಾಥಮಿಕ ಹಂತದಲ್ಲಿ ಪ್ರೀತಿಯ ಕಾರಣದಿಂದ ಈ ಕೊಲೆ ನಡೆದಿದೆ ಎಂದು ತಿಳಿಯಲಾಗಿದೆ.

Join Whatsapp