ಕುದ್ರೋಳಿ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾಗಿ ಯಾಸೀನ್ ಕುದ್ರೋಳಿ ಆಯ್ಕೆ

Prasthutha|

ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ  ಮಹಾಸಭೆಯು ಕೆ ಅಶ್ರಫ್ ರವರ  ಅಧ್ಯಕ್ಷತೆ ಯಲ್ಲಿ  ಸೋಮವಾರ ತಾ 10-01-22 ರಂದು ಸಂಜೆ ಯಾಸೀನ್ ಕುದ್ರೋಳಿಯವರ ಕಚೇರಿಯಲ್ಲಿ ಕುರ್ ಆನ್ ಪಠಣ ದೊಂದಿಗೆ ಪ್ರಾರಂಭಗೊಂಡು, ಆ ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

- Advertisement -

ಐಕ್ಯತಾ ವೇದಿಕೆಯ ಅಧ್ಯಕ್ಷರಾಗಿ  ಮುಹಮ್ಮದ್ ಯಾಸೀನ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಬಿ ಅಬೂಬಕ್ಕರ್, ಕೋಶಾಧಿಕಾರಿಯಾಗಿ ಮಕ್ಬುಲ್ ಅಹ್ಮದ್ ಜಾಮಿಯಾ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಮುಹ್ಯುದ್ದೀನ್ ಮಸೀದಿಯ ಶಂಸುದ್ದೀನ್ HBT, ನಾಸಿರ್ ಹೈಕೊ ಸಲಫೀ ಮಸೀದಿ, S A ಖಲೀಲ್ ಜಾಮಿಯಾ ಮಸೀದಿ, ಮುಹಮ್ಮದ್ ಹಾರಿಸ್ ನಡುಪಳ್ಳಿ ಮಸೀದಿ, ಉಮರ್ ಫಾರೂಕ್ ಕಂಡತ್ತ್ ಪಳ್ಳಿ ಮಸೀದಿ ಆಯ್ಕೆಯಾದರು.  

- Advertisement -

ಸಂಘಟನೆಯ ಸಂಚಾಲಕರಾಗಿ ಅಬ್ದುಲ್ ಅಝೀಝ್ ಕುದ್ರೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಜಮಾಅತೆ ಇಸ್ಲಾಮಿ ಹಿಂದ್’ನ  ಮಕ್ಬುಲ್ ಅಹ್ಮದ್,  PFIನ  ಮುಝೈರ್ ಕುದ್ರೋಳಿ ಆಯ್ಕೆಯಾದರು. ಮಾಧ್ಯಮ ಕಾರ್ಯದರ್ಶಿ ಯಾಗಿ  N K ಅಬೂಬಕ್ಕರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ  ಕೆ ಅಶ್ರಫ್ ಮಾಜಿ ಮೇಯರ್,  ಅಬ್ದುಲ್ ಲತೀಫ್ ಕೆ.ಕೆ,  ಮುಷ್ತಾಕ್ ಅಹ್ಮದ್, ಇಸ್ಮಾಯಿಲ್ SKSSF, ಅಬ್ದುಲ್ ವಹಾಬ್ ಕುದ್ರೋಳಿ,  ಅಬ್ದುಲ್ ಲತೀಫ್ ಕ್ರಿಸ್ಟಲ್, ಮುಹಮ್ಮದ್ ಇಕ್ಬಾಲ್ PFI, ಅಶ್ರಫ್ ಕಿನಾರ SSF ಆಯ್ಕೆಯಾದರು.  

ಸಭೆಯಲ್ಲಿ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಐಕ್ಯತಾ ವೇದಿಕೆಯಿಂದ ಮುಂದಿನ ಯೋಜನೆಯ ಬಗ್ಗೆ ಬಹಳ ಗಂಭೀರವಾಗಿ ಚರ್ಚೆ ನಡೆಸಲಾಯಿತು.



Join Whatsapp