ಹಿಂದುತ್ವದೊಂದಿಗೆ ಐಸಿಸ್ ಹೋಲಿಕೆ ತಪ್ಪೆಂದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್!

Prasthutha|

► ಅಯೋಧ್ಯೆ ತೀರ್ಪಿನ ಕುರಿತಾದ ಪುಸ್ತಕದಲ್ಲಿ ಹಿಂದುತ್ವ ಐಸಿಸ್ ಎಂದಿದ್ದ ಸಲ್ಮಾನ್ ಖುರ್ಷಿದ್

- Advertisement -

ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅಯೋಧ್ಯೆ ತೀರ್ಪಿನ ಕುರಿತು ಬರೆದಿರುವ ಪುಸ್ತಕದ ಬಗ್ಗೆ ಪರ ವಿರೋಧ ಚರ್ಚೆಗಳು ಏರ್ಪಟ್ಟಿದೆ. ಪುಸ್ತಕವು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಪುಸ್ತಕದಲ್ಲಿರುವ ಮಾಹಿತಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹಿಂದುತ್ವದೊಂದಿಗೆ ಐಸಿಸ್ ಅನ್ನು ಹೋಲಿಸುವುದು ತಪ್ಪು ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನಿಡಿರುವ ಆಝಾದ್ ‘ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪದಿರಬಹುದು, ಆದರೆ ಹಿಂದುತ್ವವನ್ನು ಐಸಿಸ್ ಮತ್ತು ಇಸ್ಲಾಂ ಜಿಹಾದ್ ನೊಂದಿಗೆ ಹೋಲಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಉತ್ಪ್ರೇಕ್ಷೆಯಾಗಿದೆ’ ಎಂದು ಹೇಳಿದ್ದಾರೆ.

- Advertisement -

ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದಿರುವ ‘Sunrise Over Ayodhya: Nationhood in Our Times’ ಎಂಬ ಪುಸ್ತಕದಲ್ಲಿ ‘ನಮ್ಮ ಋಷಿಮುನಿಗಳೂ ಮತ್ತು ಸಂತರಿಗೆ ತಿಳಿದಿದ್ದ ಸನಾತನ ಧರ್ಮ ಮತ್ತು ಪಾರಂಪರಿಕ ಹಿಂದುತ್ವವನ್ನು ಹೊಸ ಹಿಂದುತ್ವವಾದವು ಪಕ್ಕಕ್ಕೆ ನೂಕಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಆವೃತ್ತಿಯ ಹಿಂದುತ್ವ ಐಸಿಸ್ ಮತ್ತು ಬೊಕೊ ಹರಾಮ್ ನಂತಹ ಇಸ್ಲಾಂ ಜಿಹಾದಿ ಗುಂಪುಗಳಂತೆಯೇ ಇದೆ’ ಎಂದು ಹಿಂದುತ್ವದ ಕುರಿತು ತಿಳಿಸಲಾಗಿತ್ತು.

Join Whatsapp