ಪೊಲೀಸ್ ವಾಹನದಲ್ಲೇ ಬರ್ತ್’ಡೇ ಕೇಕ್ ಕತ್ತರಿಸಿದ ಕೊಲೆ ಆರೋಪಿ!

Prasthutha|

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ  ವಿಚಾರಣೆಗಾಗಿ 5 ವರ್ಷದ ಕೊಲೆಯತ್ನ ಪ್ರಕರಣದ ಆರೋಪಿಯೊಬ್ಬನನ್ನು ನ್ಯಾಯಾಲಯಕ್ಕೆ ಕರೆತರುವಾಗ ಪೊಲೀಸ್ ವ್ಯಾನ್ ನಲ್ಲೇ ಕೂತು ಹುಟ್ಟುಹಬ್ಬದ ಕೇಕ್ ಕತ್ತರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

- Advertisement -

ಉಲ್ಲಾಸನಗರದ ರೋಷನ್ ಝಾ ಎಂಬ ಆರೋಪಿ, ನ್ಯಾಯಾಲಯದ ಆವರಣದ ಬಳಿ ನಿಲ್ಲಿಸಿದ್ದ ಪೊಲೀಸ್ ಬೆಂಗಾವಲು ವಾಹನದ ಕಿಟಕಿಯ ಮೂಲಕ ಆತನ ಸ್ನೇಹಿತರು ತಂದ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.

ಈ ಕುರಿತು ಪ್ರತಿಕ್ರಯಿಸಿದ ಪೊಲೀಸ್ ಆಯುಕ್ತರು, ಆರೋಪಿಯಿಂದ ಇಂತಹ ಕಾರ್ಯಕ್ಕೆ ಅನುವು ಮಾಡಿಕೊಟ್ಟ ಪೊಲೀಸರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆತನನ್ನು ನ್ಯಾಯಾಲಯಕ್ಕೆ ಕರೆತಂದ ಪೊಲೀಸ್ ಬೆಂಗಾವಲು ತಂಡವು ಥಾಣೆ ಗ್ರಾಮೀಣ ಪೊಲೀಸರಿಗೆ ಸೇರಿದ್ದು. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ

Join Whatsapp