ರಕ್ತದಾನ ಮಹತ್ವದ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಿತ್ತಿಚಿತ್ರ ಸ್ವರ್ಧೆ: ಜೆ ಮಂಜುನಾಥ್

Prasthutha|

ಬೆಂಗಳೂರು ನಗರ ಜಿಲ್ಲೆ ಜ.29:  ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಜಿಲ್ಲೆಯ ಶಾಲಾ ಕಾಲೇಜು ಮಕ್ಕಳಿಗೆ ಎಚ್. ಐ. ವಿ., ಕ್ಷಯರೋಗ ಹಾಗೂ ರಕ್ತದಾನದ ಮಹತ್ವದ ಕುರಿತು  ಅರಿವು ಹಾಗೂ ಜಾಗೃತಿ  ಮೂಡಿಸಲು ಬಿತ್ತಿ ಚಿತ್ರ ಸ್ವರ್ಧೆಯನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

- Advertisement -

ಜಿಲ್ಲಾಧಿಕಾರಿಗಳ  ಅದ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಸಭೆಯಲ್ಲಿ ಮಾತನಾಡಿ ನಗರದ 5 ಸರ್ಕಾರಿ ಪ್ರೌಢಶಾಲೆ ಮತ್ತು 5 ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ  ಈ ಸ್ವರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ಶಾಲಾ ಕಾಲೇಜುಗಳಿಂದ ಈ ಸ್ವರ್ಧೆಯಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು. ಫೆಬ್ರವರಿ 3 ರಂದು ಭಿತ್ತಿ ಚಿತ್ರ ಸ್ವರ್ಧೆ ಜರುಗಲಿದ್ದು, ವಿಜೇತರಿಗೆ  ಪ್ರಥಮ ದ್ವಿತೀಯ ಹಾಗೂ ತೃತೀಯಾ ಬಹುಮಾನಗಳನ್ನು ನೀಡಲಾಗುವಿದು . ಸ್ವರ್ಧೆ ನಡೆಸಿದ 5 ಶಾಲೆಯ ನೋಡಲ್ ಶಿಕ್ಷಕರು ಹಾಗೂ 5 ಪದವಿ ಕಾಲೇಜಿನ ಅಧಿಕಾರಿಗಳಿಗೆ ಸನ್ಮಾನಿಸಲಾಗುವುದು ಎಂದರು .

ಈ ಭಿತ್ತಿ ಚಿತ್ರ ಸ್ವರ್ಧೆಯಲ್ಲಿ ಭಾಗವಹಿಸುವವರು A3 ಆಕಾರದ Ivory board ಅಥವಾ   KG card board  ರಚಿಸಬೇಕಾಗುವುದು ವಿಷಯಗಳು ಸ್ವಷ್ಟ ಹಾಗೂ ನೇರವಾಗಿದ್ದು, ಬಹು ವರ್ಣಗಳಲ್ಲಿ ಚಿತ್ರಿತವಾಗಬೇಕು ಹಾಗೂ ರಕ್ತದಾನ ಮಹತ್ವದ ವಿಷಯವನ್ನು ಒಳಗೊಂಡಿರಬೇಕು ಎಂದರು .  ಪ್ರತಿಯೊಂದು ಶಾಲಾ ಕಾಲೇಜುನಿಂದ ಒಬ್ಬ ವಿದ್ಯಾರ್ಥಿಯನ್ನು   ರಾಯಭಾರಿಯನ್ನು ಆಯ್ಕೆಮಾಡಿ ಅವರ ಮೂಲಕ ಎಚ್. ಐ. ವಿ., ಕ್ಷಯರೋಗ ಹಾಗೂ ರಕ್ತದಾನದ ಮಹತ್ವದ ಕುರಿತು  ವಿದ್ಯಾರ್ಥಿಗಳಿಗೆ ಅರಿವು  ಮೂಡಿಸಲಾಗುವುದು.

- Advertisement -

ಕಾರ್ಯಕ್ರಮವನ್ನು ನಡೆಸುವ 5 ಶಾಲೆ ಹಾಗೂ 5 ಕಾಲೇಜಿನ ಹೆಸರು ವಿಳಾಸ ಹಾಗೂ ಪ್ರಾಂಶುಪಾಲರ ಹೆಸರು ದೂರವಾಣಿ ಸಂಖ್ಯೆಯನ್ನು dapcubngu@gmail.com ಮೂಲಕ ಸಲ್ಲಿಸಬೇಕೆಂದು ಯೋಜನ ನಿರ್ದೇಶಕರು ತಿಳಿಸಿದರು . ಸಭೆಯಲ್ಲಿ ಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp