ಮುನಿರತ್ನ ಸ್ಪರ್ಧೆ ಹಿನ್ನೆಲೆ| ಅಳಿಯ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Prasthutha|

ದಾವಣಗೆರೆ: ಮಾಜಿ ಸಚಿವ ಮುನಿರತ್ನ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಅಳಿಯನೂ ಆಗಿರುವ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

- Advertisement -

ಬೆಂಗಳೂರಿನ ವೈಟ್​​ಫೀಲ್ಡ್​​​ ಡಿಸಿಪಿ ಗಿರೀಶ್​ ಮತ್ತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರನ್ನು​​ ವರ್ಗಾವಣೆ ಮಾಡಲಾಗಿದೆ. ಅದರಂತೆ ವೈಟ್​​ಫೀಲ್ಡ್ ವಿಭಾಗಕ್ಕೆ​​​ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ನೂತನ ಡಿಸಿಪಿ ಆಗಿ ನೇಮಕ ಮಾಡಲಾಗಿದೆ.

ಯಾವುದೇ ಅಧಿಕಾರಿಯ ಸಂಬಂಧಿಕರು ಚುನಾವಣೆಗೆ ಸ್ಪರ್ಧಿಸಿದರೆ ಅಂತಹ ಅಧಿಕಾರಿಯನ್ನ ಚುನಾವಣಾ ಸೇವೆಯಿಂದ ಬಿಡುಗಡೆ ಮಾಡಬೇಕು. ಇದು ಚುನಾವಣಾ ಆಯೋಗದ ನಿಯಮವಾಗಿದೆ. ಇದೇ ಕಾರಣಕ್ಕೆ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಅವರನ್ನು ಯಾವುದೇ ಹುದ್ದೆ ತೊರಿಸದೇ ವರ್ಗಾವಣೆ ಮಾಡಲಾಗಿದೆ. ಸಿಬಿ ರಿಷ್ಯಂತ್ ಅವರು ಸಚಿವ ಮುನಿರತ್ನ ಅವರ ದ್ವಿತೀಯ ಪುತ್ರಿಯ ಪತಿಯಾಗಿದ್ದಾರೆ. ರಿಷ್ಯಂತ್ ಅವರಿಂದ ತೆರವಾದ ಸ್ಥಾನಕ್ಕೆ ಕಲಬುರ್ಗಿ ಎಸ್ಪಿ ಡಾ. ಅರುಣ್ ಕೆ ಅವರನ್ನು ನಿಯೋಜಿಸಲಾಗಿದೆ.



Join Whatsapp