157 ಮಂದಿಯನ್ನು ಸುಡಾನ್‌ನಿಂದ ಹಡಗೇರಿಸಿ ತೆರವುಗೊಳಿಸಿದ ಸೌದಿ ಅರೇಬಿಯಾ

Prasthutha|

ರಿಯಾದ್: 99 ಮಂದಿ ಸೌದಿ ಅರೇಬಿಯಾ ಪ್ರಜೆಗಳು ಹಾಗೂ ಭಾರತ ಸಹಿತ ಇತರ ದೇಶಗಳ 66 ಜನರನ್ನು ಹೊತ್ತ ಸೌದಿ ಅರೇಬಿಯಾದ ಹಡಗು ಪೋರ್ಟ್ ಸುಡಾನ್‌ನಿಂದ ಜಿದ್ದಾದತ್ತ ಕಡಲಲ್ಲಿ ಸಾಗಿದೆ.

- Advertisement -

ಜನರಲ್ ಅಬ್ದುಲ್ ಫತಾಹ್ ಅಲ್ ಬರ್ಹಾನ್ ನೇತೃತ್ವದ ಸೇನೆ ಹಾಗೂ ಜನರಲ್ ಮುಹಮ್ಮದ್ ಹಮ್ದಾನ್ ನಾಯಕತ್ವದ ಅರೆ ಸೇನಾ ಪಡೆ ಒಳ ಕದನದಲ್ಲಿ ತೊಡಗಿರುವುದರಿಂದ ಸುಡಾನ್‌ನಲ್ಲಿ ವಿದೇಶಿ ನಾಗರಿಕರು ಅತಂತ್ರರಾಗಿದ್ದರು.

ಏಪ್ರಿಲ್ 16ರಂದು ಭಾರತ ಮೂಲದ ಆಲ್ಬರ್ಟ್ ಆಗಸ್ಟಿನ್ ಎಂಬ ಭಾರತ ಮೂಲದವರು ಗುಂಡಿಗೆ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸೌದಿಯ ನೆರವು ಕೇಳಿತ್ತು.

- Advertisement -

ಭಾರತೀಯರ ಸಹಿತ 157 ಜನರನ್ನು ಸೌದಿ ಹಡಗು ಈಗ ತೆರವು ಮಾಡಿದೆ. ಇದರಲ್ಲಿ 66 ಜನರು ಭಾರತ, ಕುವೈತ್, ಕತಾರ್, ಯುಎಇ, ಈಜಿಪ್ತ್, ಟ್ಯುನೀಶಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪ್ಪೀನ್ಸ್, ಬರ್ಕಿನಾ ಫಾಸೋ, ಕೆನಡಾ ದೇಶಗಳಿಗೆ ಸೇರಿದವರಾಗಿದ್ದಾರೆ.

Join Whatsapp