ಮುಂಬೈ: ವಿಡಿ ಸಾವರ್ಕರ್ ಬ್ರಿಟಿಷರಿಗೆ ನೆರವಾಗಿದ್ದು, ಅದಕ್ಕಾಗಿ ಹಣ ಪಡೆಯುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಆಕ್ರೋಶಗೊಂಡ ಬಿಜೆಪಿಯ ಕಾರ್ಯಕರ್ತರು ರಾಗಾ ಪೋಸ್ಟರ್ ಗೆ ಮಸಿಬಳಿದು, ಶೂಗಳನ್ನೆಸೆದು ಪ್ರತಿಭಟನೆ ನಡೆಸಿದ್ದಾರೆ.
ಸಾವರ್ಕರ್ ನನ್ನು ಅವಮಾನಿಸಿದಕ್ಕಾಗಿ ನಾವು ‘ ಜೂತಾ ಮಾರೋ ಆಂದೋಲನ್’ ನಡೆಸುತ್ತಿದ್ದೇವೆ ಎಂದು ಬಿಜೆಪಿ ನಾಯಕ ರಾಮ ಕದಮ್ ಹೇಳಿದರು. ರಾಹುಲ್ ಗಾಂಧಿ ಮಾಡಿದ ಟೀಕೆಗಳು ಅವಮಾನಕಾರಿ ಮತ್ತು ಆಘಾತಕಾರಿಯಾದಂತದ್ದು. ಅದು ಸ್ವೀಕಾರ್ಹವಲ್ಲ. ಆದ್ದರಿಂದ ರಾಹುಲ್ ಆ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದರು.
ರಾಹುಲ್ ಹೇಳಿಕೆ ಬಗ್ಗೆ ಉದ್ಧವ್ ಠಾಕ್ರೆ ನಿಲುವೇನು? ಅವರ್ಯಾಕೆ ರಾಹುಲ್ ಹೇಳಿಕೆಯನ್ನು ವಿರೋಧಿಸುತ್ತಿಲ್ಲ. ಅವರು ಹಿಂದುತ್ವವನ್ನು ತೊರೆದಿದ್ದಾರೆ ಎಂದು ಕದಮ್ ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿ ವರ್ಷಗಟ್ಟಲೆ ಜೈಲುವಾಸ ಅನುಭವಿಸಿದ್ದಾರೆ. ಆದರೆ ಆರ್ರೆಸ್ಸೆಸ್ಸ್ ಆ ಸಮಯದಲ್ಲಿ ಬ್ರಿಟಿಷರಿಗೆ ನೆರವಾಗುತ್ತಿತ್ತು. ಸಾವರ್ಕರ್ ಆ ನೆರವಿಗಾಗಿ ಬ್ರಿಟಿಷರೊಂದಿಗೆ ಹಣವೂ ಪಡೆಯುತ್ತಿದ್ದರು ಎಂಬ ಹೇಳಿಕೆ ನೀಡಿದ್ದರು.