ಸರ್ಕಾರಿ ವಸತಿ ಶಾಲೆಯಲ್ಲಿ RSS ಶಿಬಿರ: ಕೋಟಾ ಶ್ರೀನಿವಾಸ್ ಶಿಫಾರಸ್ಸು

Prasthutha|

ಹಿಂದುತ್ವ ಕಾರ್ಯಗಳಿಗೆ ಶಾಲೆ ಬಳಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ SFI

- Advertisement -

ಬೆಂಗಳೂರು: ರಾಜ್ಯದ ಕೆಲವು ವಸತಿ ಶಾಲೆಗಳಲ್ಲಿ ಆರ್ರೆಸ್ಸೆಸ್ ಶಿಬಿರಕ್ಕೆ ಸಚಿವಾಲಯ ಅನುಮತಿ ನೀಡಿದ್ದು ತರಬೇತಿ ನಡೆಯುತ್ತಿದೆ. ಇದಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ( SFI) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಿಫಾರಸಿನ‌ ಮೇರೆಗೆ ತರಬೇತಿ ನಡೆಯುತ್ತಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಿತ ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ.

- Advertisement -

ಸರ್ಕಾರೀ ಅಧಿಕೃತ ಸಂಸ್ಥೆಯ ಹೊರತಾಗಿ ಸಂಘ ಪರಿವಾರದ ತಾಲೀಮು ಶಿಬಿರ ನಡೆಸಲು ಅನುಮತಿ ನೀಡಿದ್ದು ಖಂಡನೀಯ. ಸ್ವತ: ಸಚಿವರೇ ಸರ್ಕಾರದ ಅಧೀನದಲ್ಲಿರುವ ವಸತಿ ಶಾಲೆಗಳನ್ನು ಹಿಂದುತ್ವ ಕಾರ್ಯಗಳ ಬಳಕೆಗೆ ಬಿಟ್ಟುಕೊಡುವುದು ಸರಿಯಲ್ಲ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವ ರೆಡ್ಡಿ ಹೇಳಿದರು.

ಪರಿವಾರದ ಚಟುವಟಿಕೆಗಳಿಗೆ ಶಾಲೆಯನ್ನು ಅನುಮತಿಸಿಕೊಟ್ಟ ಸಚಿವರ ನಡೆ ವಿರೋಧಿಸಿ ಇತರ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಂಭಾಗ ಪ್ರತಿಭಟಿಸುವ ಎ‍‍ಚ್ಚರಿಕೆಯನ್ನೂ ಎಸ್ಎಫ್ಐ ನೀಡಿ‍ದೆ.

Join Whatsapp