ಮುಲ್ಕಿ | ಮುಸ್ಲಿಮ್ ಯುವಕನಿಗೆ ಹಲ್ಲೆ: ಮೂವರು ಸಂಘಪರಿವಾರದ ಕಾರ್ಯಕರ್ತರ ಬಂಧನ

Prasthutha|

- Advertisement -

ಮುಲ್ಕಿ: ಮುಸ್ಲಿಮ್ ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧಿತರನ್ನು ದಿವ್ಯೇಶ್ ದೇವಾಡಿಗಾ, ರಾಜೇಶ್, ಯೋಗಿಶ್ ಕುಮಾರ್ ಎಂದು ಗುರುತಿಸಲಾಗಿದೆ.

- Advertisement -

ಶನಿವಾರ ಸಂಘಪರಿವಾರದ ಕಾರ್ಯಕರ್ತರು ಹಳೆಯಂಗಡಿಯ ಕೊಪ್ಪಳ ನಿವಾಸಿ ದಾವೂದ್ ನನ್ನು ಕೆರೆಕಾಡು ಸ್ಮಶಾನದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.

ಬಂಧಿತರ ಮೇಲೆ 324 ಸೆಕ್ಷನ್ ದಾಖಲಾಗಿತ್ತು.
ಇದೇ ವೇಳೆ ಹಲ್ಲೆಗೊಳಗಾದ ಸಂತ್ರಸ್ತನ ಮೇಲೆಯೂ ಪೋಕ್ಸೋ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

Join Whatsapp