ಕಾಂಗ್ರೆಸ್ ನಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ: ಡಾ.ಜಿ. ಪರಮೇಶ್ವರ್

Prasthutha|

- Advertisement -

ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ” ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬೀಳಗಿ ತಾಲೂಕಿನ ಅನಗವಾಡಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಜಾತಿಯಾಧಾರದಲ್ಲಿ ಮುಖ್ಯಮಂತ್ರಿಯನ್ನು ಆರಿಸುವುದಿಲ್ಲ. ಆ ಕಾಲಕ್ಕೆ ಯಾರು ಸಮರ್ಥರಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

- Advertisement -

ಇನ್ನು ದಲಿತ ಮುಖ್ಯಮಂತ್ರಿ ಆಗಬೇಕೆಂದು ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರು ಆಸೆ ಪಡುವುದು ಸಹಜ, ಅದನ್ನು ತಡೆಯಲು ಸಾಧ್ಯವಿಲ್ಲ. ಈಗ ಜಾತಿ ಆಧಾರದ ಮೇಲೆ ರಾಜಕೀಯ ನಿಂತಿರುವುದು ದುರ್ದೈವ ಎಂದು ಹೇಳಿದ್ದಾರೆ.

Join Whatsapp