ಮುಖೇಶ್ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ನೀಡಲು ಸುಪ್ರೀಂ ನಿರ್ದೇಶನ

Prasthutha|

ಹೊಸದಿಲ್ಲಿ: ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ Z+ ಭದ್ರತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಗೃಹ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

- Advertisement -

ಮುಖೇಶ್ ಅಂಬಾನಿ ಸೇರಿದಂತೆ ಪ್ರಭಾವಿಗಳ ಮನೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಭಾರತ ಮತ್ತು ವಿದೇಶದಲ್ಲೂ ಅತ್ಯುನ್ನತ ಮಟ್ಟದ ಝಡ್ ಪ್ಲಸ್ ಭದ್ರತೆಯನ್ನು ನೀಡುವಂತೆ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಈ ಆದೇಶ ನೀಡಿದೆ.

ಆದರೆ ಭದ್ರತೆಯ ವೆಚ್ಚವನ್ನು ಮುಖೇಶ್ ಅಂಬಾನಿ ಅವರೇ ಭರಿಸಬೇಕು ಎಂದು ಸೂಚಿಸಿದೆ.

- Advertisement -

ಅಂಬಾನಿ ಮತ್ತು ಅವರ ಕುಟುಂಬ ಭಾರತದಲ್ಲಿದ್ದರೆ, ಭದ್ರತೆಯ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ವಹಿಸಬೇಕು. ವಿದೇಶಕ್ಕೆ ಹೋಗುವಾಗ ಕೇಂದ್ರ ಗೃಹ ಸಚಿವಾಲಯ ಭದ್ರತೆ ಒದಗಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Join Whatsapp