G20 ಶೃಂಗಸಭೆಗೆ ಅಲಂಕಾರಕ್ಕಾಗಿ ತಂದಿದ್ದ ಹೂವಿನ ಕುಂಡಗಳು ಕಳವು

Prasthutha|

ಹೊಸದಿಲ್ಲಿ: ಜಿ-20 ಶೃಂಗಸಭೆಗೆ ಅಲಂಕಾರಕ್ಕಾಗಿ ತಂದಿದ್ದ ಹೂವಿನ ಕುಂಡಗಳನ್ನು ಕಳವು ಮಾಡಲಾಗಿದೆ.

- Advertisement -

ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಬಂದ ಇಬ್ಬರು ಮಧ್ಯವಯಸ್ಕ ವ್ಯಕ್ತಿಗಳು ಹೂವಿನ ಕುಂಡಗಳನ್ನು ಹೊತ್ತೊಯ್ಯುತ್ತಿರುವ ವೀಡಿಯೋ ವ್ಯಾಪಕ ವೈರಲ್ ಆಗಿದೆ.

ಕಳವು ಮಾಡುತ್ತಿರುವ ವೇಳೆ ಹಲವಾರು ವಾಹನಗಳು ಆ ಮಾರ್ಗವಾಗಿ ಸಂಚರಿಸುತ್ತಿದ್ದರೂ ಲೆಕ್ಕಿಸದೆ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ತುಂಬುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

- Advertisement -

ಇದೀಗ ಹೂ ಕುಂಡಗಳನ್ನು ಕದ್ದೊಯ್ದ ಇಬ್ಬರ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Join Whatsapp