ಮುಹಮ್ಮದ್ ಸಿರಾಜ್ ಅತ್ಯುತ್ತಮ ಏಕದಿನ ಬೌಲರ್; 2022ರ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರರನ್ನ ಹೆಸರಿಸಿದ ಬಿಸಿಸಿಐ

Prasthutha|

2022ರಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಬಿಸಿಸಿಐ, ಶನಿವಾರ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ‌.

- Advertisement -

ಟೆಸ್ಟ್
ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಅತ್ಯುತ್ತಮ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
7 ಟೆಸ್ಟ್ ಪಂದ್ಯಗಳಲ್ಲಿ 61.81 ಸರಾಸರಿಯಲ್ಲಿ ಪಂತ್, ಪ್ರಸಕ್ತ ವರ್ಷ 680 ರನ್ ಗಳಿಸಿದ್ದಾರೆ‌. 146 ರನ್ ಗರಿಷ್ಠ ಸ್ಕೋರ್ ಆಗಿದೆ‌.
ಮತ್ತೊಂದೆಡೆ, ಐದು ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದಿರುವ ಬಲಗೈ ವೇಗಿ ಬುಮ್ರಾ, ಅತ್ಯುತ್ತಮ ಟೆಸ್ಟ್ ಬೌಲರ್ ಎನಿಸಿದ್ದಾರೆ.

ಏಕದಿನ
ಏಕದಿನ ಮಾದರಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಸಿರಾಜ್, ಕ್ರಮವಾಗಿ ಅತ್ಯುತ್ತಮ ಬ್ಯಾಟರ್ ಮತ್ತು ಬೌಲರ್ ಪ್ರಶಸ್ತಿ ಪಡೆದಿದ್ದಾರೆ.
17 ಪಂದ್ಯಗಳಲ್ಲಿ ಅಯ್ಯರ್ 724 ರನ್ ಗಳಿಸಿದ್ದು, ಅಜೇಯ 113 ರನ್ ಟಾಪ್ ಸ್ಕೋರ್ ಎನಿಸಿದೆ‌. ಬೌಲಿಂಗ್ ನಲ್ಲಿ ಸಿರಾಜ್ 15 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಮಿಂಚಿದ್ದಾರೆ.

- Advertisement -

ಟಿ20
ಟಿ20 ವಿಶ್ವಕಪ್ ಸೇರಿದಂತೆ ಈ ವರ್ಷದ ಬಹುತೇಕ ಚುಟುಕು ಟೂರ್ನಿಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಬ್ಯಾಟರ್ ಎಂದು ಬಿಸಿಸಿಐ ಘೋಷಿಸಿದೆ.
ಸೂರ್ಯಕುಮಾರ್ 31 ಪಂದ್ಯಗಳಲ್ಲಿ 1164 ರನ್ ಗಳಿಸಿದ್ದು, ಗರಿಷ್ಠ ಸ್ಕೋರ್ 117 ಆಗಿದೆ.

ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಬಿಸಿಸಿಐ ಅತ್ಯುತ್ತಮ ಬೌಲರ್ ಶ್ರೇಯಾಂಕ ನೀಡಿದ್ದು
ಭುವಿ, 32 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.



Join Whatsapp