ಮುಸ್ಲಿಮ್ ಬಾಹುಳ್ಯದ ಪ್ರದೇಶದಲ್ಲಿರುವ ಮನೆಗಳನ್ನು ತೆರವುಗೊಳಿಸಲು ಆದೇಶಿಸಿದ ಹೈಕೋರ್ಟ್ ; ವ್ಯಾಪಕ ಆಕ್ರೋಶ

Prasthutha|

ಡೆಹ್ರಾಡೂನ್: ಉತ್ತರಾಖಂಡದ ಗಫೂರ್ ಬಸ್ತಿ ಎಂಬಲ್ಲಿ ಹಲ್ದ್ವಾನಿ ರೈಲ್ವೆ ನಿಲ್ದಾಣದ ಪಕ್ಕದ ರೈಲ್ವೆ ಭೂಮಿಯಲ್ಲಿ ನೂರಾರು ಮುಸ್ಲಿಮ್ ಕಟುಂಬಗಳು ವಾಸಿಸುತ್ತಿದ್ದು, ಆ ಪ್ರದೇಶದಲ್ಲಿರುವ ಮನೆಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.

- Advertisement -


ಸುಮಾರು 4,300 ಕುಟುಂಬಗಳು ವಾಸಿಸುತ್ತಿರುವ ಜಮೀನಿನ ಮನೆಗಳನ್ನು ತೆರವುಗೊಳಿಸುವಂತೆ ಹೈಕೊರ್ಟಿನ ಆದೇಶದ ವಿರುದ್ಧ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.

ಮುಸ್ಲಿಂ ಬಾಹುಳ್ಯದ ಈ ಪ್ರದೇಶದಲ್ಲಿ ಮಸೀದಿಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ. ಈ ಪ್ರದೇಶದ ಮನೆಗಳನ್ನು ತೆರವುಗೊಳಿಸುವಂತೆ ಉತ್ತರಾಖಂಡ್ ಹೈಕೋರ್ಟಿನ ಆದೇಶದ ವಿರುದ್ಧ ಉತ್ತರಾಖಂಡ್ ನಲ್ಲಿ ನೂರಾರು ಮುಸ್ಲಿಂ ಕುಟುಂಬಗಳು ಪ್ರತಿಭಟನೆ ನಡೆಸುತ್ತಿವೆ ಎಂದು maktoobmedia.com ವರದಿ ಮಾಡಿದೆ.

Join Whatsapp