ಉದ್ರೇಕಕಾರಿ ಭಾಷಣ ಆರೋಪ: ಮುಫ್ತಿ ಸಲ್ಮಾನ್ ಬಂಧನ

Prasthutha|

ಅಹ್ಮದಾಬಾದ್: ಉದ್ರೇಕಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮುಂಬೈ ಮೂಲದ ಇಸ್ಲಾಮಿಕ್ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಅವರನ್ನು ಬಂಧಿಸಿದ್ದಾರೆ.

- Advertisement -

ಜನವರಿ 31ರಂದು ಗುಜರಾತ್ ನ ಜುನಾಗಢ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಝ್ಹರಿ ಮತ್ತು ಇತರ ಇಬ್ಬರು ಧಾರ್ಮಿಕ ಮುಖಂಡರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಅಝ್ಹರಿ ಅವರನ್ನು ಮುಂಬೈನ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.

ಈ ಭಾಷಣದ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಸ್ಥಳೀಯ ಸಂಘಟಕ ಮುಹಮ್ಮದ್ ಯೂಸುಫ್ ಮಲೀಕ್ ಮತ್ತು ಅಝೀಮ್ ಹಬೀಬ್ ವಡೇದರ ವಿರುದ್ಧವೂ ಐಪಿಸಿ ಸೆಕ್ಷನ್ 153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

ಬಂಧನದ ಕುರಿತಂತೆ ಮಾತನಾಡಿರುವ ಮೌಲಾನಾ ಮುಫ್ತಿ ಸಲ್ಮಾನ್ ಅಝ್ಹರಿ ಅವರ ವಕೀಲರಾದ ವಕೀಲ ಆರಿಫ್ ಸಿದ್ದಿಕಿ, ” ಪೊಲೀಸರು ಟ್ರಾನ್ಸಿಟ್ ರಿಮಾಂಡ್ ಗೆ ಅರ್ಜಿ ಸಲ್ಲಿಸಿದ್ದರು, ನಾವು ಅದನ್ನು ವಿರೋಧಿಸಿದ್ದೇವೆ ಮತ್ತು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ನಾವು ಹೇಳಿದ್ದೇವೆ. ಅವರನ್ನು 2 ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ಕಳುಹಿಸಲಾಗಿದೆ. ಅವರನ್ನು ಜುನಾಗಢ (ಗುಜರಾತ್) ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಮುಫ್ತಿ ಸಲ್ಮಾನ್ ಬಂಧನವಾಗುತ್ತಿದ್ದಂತೆ ಘಾಟ್ಕೋಪರ್ ಪೊಲೀಸ್ ಠಾಣೆಯ ಹೊರಗೆ ಅವರ ಬೆಂಬಲಿಗರ ಗುಂಪು ಜಮಾಯಿಸಲು ಪ್ರಾರಂಭಿಸಿತು. ನಂತರ ಪೊಲೀಸರ ವಿರುದ್ಧ ಪ್ರತಿಭಟನೆ ಆರಂಭಗೊಂಡಿತು. ಮುಂಬೈನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಘಾಟ್ಕೋಪರ್ ಪ್ರದೇಶದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ. ಮುಂಬೈನ ಜನರಿಗೆ ನಾನು ಹೇಳಲು ಬಯಸುತ್ತೇನೆ.. ಯಾವುದೇ ಪರಿಸ್ಥಿಯನ್ನು ನಿಯಂತ್ರಿಸಲು ಪೊಲೀಸರು ಸನ್ನದ್ಧವಾಗಿದ್ದು, ಎಲ್ಲ ರಸ್ತೆಗಳಲ್ಲೂ ಜನರ ನೆರವಿಗಾಗಿ ಪೊಲೀಸರು ರಸ್ತೆ ರಸ್ತೆಯಲ್ಲಿದ್ದಾರೆ ಎಂದು ಡಿಸಿಪಿ ಹೇಮರಾಜ್ಸಿಂಗ್ ರಜಪೂತ್ ಹೇಳಿದ್ದಾರೆ.

Join Whatsapp