ಬಹುನಿರೀಕ್ಷಿತ ರಣಜಿ ಟ್ರೋಫಿ 2022: ಫೆಬ್ರವರಿ 16 ರಿಂದ ಪ್ರಾರಂಭ

Prasthutha|

ನವದೆಹಲಿ: ಬಹುನಿರೀಕ್ಷಿತ ರಣಜಿ ಟ್ರೋಫಿ  ಫೆಬ್ರವರಿ 16ರಿಂದ ಆರಂಭಗೊಳ್ಳಲಿದ್ದು, ಲೀಗ್‌ ಹಂತವು ಮಾರ್ಚ್‌ 5ರ ವರೆಗೂ ನಡೆಯಲಿದೆ. ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿದ್ದ ಟೂರ್ನಿಯನ್ನು ಎರಡು ಹಂತಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ನಾಕೌಟ್‌ ಪಂದ್ಯಗಳು ಐಪಿಎಲ್‌  ಟೂರ್ನಿ ಮುಕ್ತಾಯಗೊಂಡ ಬಳಿಕ ಜೂನ್‌ ತಿಂಗಳಲ್ಲಿ ನಡೆಯಲಿದೆ.

- Advertisement -

ಮೂಲಗಳ ಪ್ರಕಾರ ಅಹಮದಾಬಾದ್‌, ಕೋಲ್ಕತಾ, ತಿರುವನಂತಪುರಂ, ಕಟಕ್‌, ಚೆನ್ನೈ, ಗುವಾಹಟಿ, ಹೈದರಾಬಾದ್‌, ಬರೋಡಾ ಹಾಗೂ ರಾಜ್‌ಕೋಟ್‌ನಲ್ಲಿ ಲೀಗ್‌ ಪಂದ್ಯಗಳು ನಡೆಯಲಿವೆ. 9 ನಗರಗಳಲ್ಲಿ ಬಿಸಿಸಿಐ ಬಯೋ ಬಬಲ್‌ ವ್ಯವಸ್ಥೆ ಮಾಡಲಿದೆ. ಲೀಗ್‌ ಪಂದ್ಯಗಳಿಗೆ ಬೆಂಗಳೂರನ್ನು ಪರಿಗಣಿಸದೆ ಇರುವುದು ಅಚ್ಚರಿಗೆ ಕಾರಣವಾಗಿದ್ದು, ನಾಕೌಟ್‌ ಪಂದ್ಯಗಳನ್ನು ಬೆಂಗಳೂರಿನಲ್ಲಿ  ಆಯೋಜಿಸಬಹುದು ಎನ್ನಲಾಗಿದೆ.

38 ತಂಡಗಳು ಲೀಗ್‌ ಹಂತದಲ್ಲಿ ಸ್ಪರ್ಧಿಸಲಿದ್ದು, ಈ ಬಾರಿ ಕಡಿಮೆ ಸಮಯದಲ್ಲಿ ಪಂದ್ಯಗಳನ್ನು ಮುಗಿಸಬೇಕಿರುವ ಅನಿವಾರ್ಯತೆ ಎದುರಾಗಿರುವ ಕಾರಣ ಟೂರ್ನಿಯ ಮಾದರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. 8 ಎಲೈಟ್‌ ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳು ಇರಲಿವೆ. ಪ್ಲೇಟ್‌ ಗುಂಪಿನಲ್ಲಿ 6 ತಂಡಗಳು ಸ್ಪರ್ಧಿಸಲಿವೆ. ಇನ್ನು ಐಪಿಎಲ್‌ ಟೂರ್ನಿಗಳು ಮುಕ್ತಾಯದ ಬಳಿಕ ಜೂನ್ ತಿಂಗಳಿನಲ್ಲಿ ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ. 

Join Whatsapp