ಕೊಪ್ಪಳ: ಶಂಸುಲ್ ಉಲಮಾ ಮದ್ರಸ ಕೊಪ್ಪಳ ಇಂದು ಮದ್ರಸ ಹಾಲ್ ನಲ್ಲಿ ಮುಅಲ್ಲಿಂ ಡೇ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.
ಸಭೆಯ ಉದ್ದೇಶಿಸಿ ಮಾತನಾಡಿದ ಸ್ಥಳಿಯ ಖತೀಬ್ ಉಸ್ತಾದರಾದ ಹಾರೀಸ್ ಹನೀಫಿ ಯವರು *”ಮುಅಲ್ಲಿಂ ಡೇ
ಕಂದಮ್ಮಗಳ ಮುದ್ದು ಹೃದಯದಲ್ಲಿ ಜ್ಞಾನದ ಬೆಳಕನ್ನು ತುಂಬಿ ಅವರನ್ನು ಒಳಿತಿನ ಹಾದಿಯಲ್ಲಿ ಹಿಡಿದಿಟ್ಟು ಉತ್ತಮ ವ್ಯಕ್ತಿತ್ವ ಉತ್ತಮ ನಾಡು ಉತ್ತಮ ಸಮಾಜವನ್ನು ರೂಪಿಸಲು ಧರ್ಮೋಪದೇಶದ ಹಾದಿಯಲ್ಲಿ ಕಷ್ಟಗಳ ಮರೆತು ಪ್ರಾಮಾಣಿಕ ಧಾರ್ಮಿಕ ಸೇವೆಯನ್ನು ಮಾಡುತ್ತಿರುವ ನಮ್ಮ ಪ್ರೀತಿಯ ಉಸ್ತಾದರನ್ನು ಹೆಮ್ಮೆಯಿಂದ ಸ್ಮರಿಸುವ ಮುಅಲ್ಲಿಂ ಡೇ ಉಸ್ತಾದರುಗಳಿಗೆ ಮತ್ತು ಮಕ್ಕಳಿಗೆ ಹೊಸ ಉತ್ತೇಜನ ನೀಡುತ್ತದೆ.
ಸಮಸ್ತ ವಿದ್ವಾಂಸ ಸಂಘಟನೆ ಈ ಮೂಲಕ ಸಮಾಜಕ್ಕೆ ಶೈಕ್ಷಣಿಕ ಜಾಗೃತಿ ಮತ್ತು ಉತ್ತಮ ಸಂಸ್ಕೃತಿಯ ಸಂದೇಶ ನೀಡುತ್ತಿದೆ ಎಂದರು.
ಸಹ ಅಧ್ಯಾಪಕರಾದ ಸಿದ್ದೀಖ್ ಹನೀಫಿ ಒಂದೆರಡು ಹಿತ ನುಡಿಗಳನ್ನು ನುಡಿದರು.
ಮುಖ್ಯ ಅತಿಥಿಗಳಾಗಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ ಪಿ. ಕೋಶಾಧಿಕಾರಿ ಜಿ.ಎ.
ಇಬ್ರಾಹಿಂ ಮೊದಲಾದವರು ಭಾಗವಹಿಸಿದರು.