ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ ಕುಸಿದ ಮೇಲ್ಛಾವಣಿ: 10 ಮಂದಿ ಮೃತ್ಯು

Prasthutha|

ಬೀಜಿಂಗ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದವರ ಮೇಲೆ ಮೇಲ್ಛಾವಣಿ ಕುಸಿದು ಹತ್ತು ಮಂದಿ ಮೃತಪಟ್ಟಿದ್ದು, ಓರ್ವ ಅವಶೇಷಗಳಡಿ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ.

- Advertisement -

ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಕಿಕಿಹಾರ್‌ನಲ್ಲಿರುವ ನಂ. 34ನಲ್ಲಿರುವ ಜಿಮ್‌ನಲ್ಲಿ ಘಟನೆ ಸಂಭವಿಸಿದ್ದು ಮೇಲ್ಚಾವಣಿ ಕುಸಿದ ವೇಳೆ ಹದಿನಾಲ್ಕು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ ವೇಳೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಆರು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಒಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

Join Whatsapp