ಮಧ್ಯಪ್ರದೇಶ । ತರಗತಿಯೊಳಗೆ ನಮಾಝ್ ನಿರ್ವಹಿಸಿದ ಹಿಜಾಬ್ ಧಾರಿಣಿ ಬಾಲಕಿ; ತನಿಖೆಗೆ ಆದೇಶ

Prasthutha|

ಭೋಪಾಲ್: ಮುಸ್ಲಿಮ್ ಬಾಲಕಿಯೊಬ್ಬಳು ಹಿಜಾಬ್ ಧರಿಸಿ ತರಗತಿಯೊಳಗೆ ನಮಾಝ್ ನಿರ್ವಹಿಸಿದ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆಯೊಂದು ನೀಡಿದ ದೂರಿನನ್ವಯ ತನಿಖೆ ನಡೆಸುವಂತೆ ಮಧ್ಯಪ್ರದೇಶದ ಸಾಗರದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಹಿಜಾಬ್ ಧಾರಿಣಿ ನಮಾಝ್ ನಿರ್ವಹಿಸುತ್ತಿರುವ ವೀಡಿಯೋ ಪತ್ತೆಯಾದ ಬಳಿಕ ಹಿಂದೂ ಜಾಗರಣ ಮಂಚ್ ಎಂದು ಬಲಪಂಥೀಯ ಸಂಘಟನೆ ಬಾಲಕಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ವಿದ್ಯಾಲಯದ ರಿಜಿಸ್ಟಾರ್ ಸಂತೋಪ್, ವೀಡಿಯೋ ಕ್ಲಿಪ್ ಸಹಿತ ದೂರು ಸ್ವೀಕರಿಸಲಾಗಿದೆ. ಈ ಬಗ್ಗೆ ಪರಿಶೀಲನೆಗಾಗಿ ಐದು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯು ಮೂರು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಇದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ವ್ಯವಸ್ಥೆಗೊಳಿಸಿಲ್ಲ. ಆದರೆ ವಿದ್ಯಾರ್ಥಿಗಳು ನೈತಿಕತೆಯೆ ವಸ್ತ್ರಧಾರಣೆಯಲ್ಲಿ ತರಗತಿಗೆ ಹಾಜರಾಗಬೇಕು ಎಂದು HGU ಮಾಧ್ಯಮ ಉಸ್ತುವಾರಿ ವಿವೇಕ್ ಜೈಸ್ವಾಲ್ ತಿಳಿಸಿದ್ದಾರೆ.

- Advertisement -

ಹಿಂದೂ ಜಾಗರಣ ಮಂಚ್’ನ ಸಾಗರ ಘಟಕದ ಅಧ್ಯಕ್ಷ ಉಮೇಶ್ ಸರಾಫ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ವೀಡಿಯೋದಲ್ಲಿರುವ ಹುಡುಗಿ ಹಲವು ಸಮಯದಿಂದ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದಾಳೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಈ ಮಧ್ಯೆ ಶುಕ್ರವಾರ ಮಧ್ಯಾಹ್ನ ತರಗತಿಯೊಳಗೆ ನಮಾಝ್ ನಿರ್ವಹಿಸುತ್ತಿದ್ದಳು. ಈ ಸಂಬಂಧ ಉಪಕುಲಪತಿ ಮತ್ತು ರಿಜಿಸ್ಟಾರ್’ಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

Join Whatsapp