ಮಡಿಕೇರಿ; ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ವಿರುದ್ಧ ಮಾತಾಡ್ಲಿಕ್ಕೆ ಸಂಸದ ಪ್ರತಾಪ್ ಸಿಂಹಗೆ ಯೋಗ್ಯತೆಯಿಲ್ಲ ಎಂದು ಮೈಸೂರು ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ವಾಗ್ದಾಳಿ ನಡೆಸಿದ್ದಾರೆ.
ಹೆಂಡತಿಯ ಹೆಸರಿಗೆ ನಿವೇಶನ ಪಡೆದು ತಂಗಿ ಅಂತ ಸುಳ್ಳು ಹೇಳಿರುವ ಗಿರಾಕಿ ಪ್ರತಾಪ್ ಸಿಂಹ. ಯೋಗ್ಯತೆ ಇಲ್ಲದ ವ್ಯಕ್ತಿ ಕರವೇ ರಾಜ್ಯಾಧ್ಯಕ್ಷರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಒಬ್ಬ ಬಕೆಟ್ ರಾಜಕಾರಣಿ ಬಕೆಟ್ ಹಿಡಿದು ಟಿಕೆಟ್ ಗಿಟ್ಟಿಸಿಕೊಂಡ ವ್ಯಕ್ತಿ ಅಂತ ನಮಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ರಾಜ್ಯದಲ್ಲಿ ಆರುವತ್ತು ಲಕ್ಷ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಿದ್ದಾರೆ ರಾಜ್ಯಾಧ್ಯಕ್ಷರಾಗಿರುವ ನಾರಾಯಣಗೌಡರು ಎಂದೂ ಕೂಡ ರಾಜಕೀಯವನ್ನು ಬಯಸಿಲ್ಲ ನಿರಂತರವಾಗಿ ಕನ್ನಡ ಪರ ಹೋರಾಟದ ಬಗ್ಗೆ ನಿರಂತರ ಸೇವೆ ಸಲ್ಲಿಸುತ್ತಾ ರಾಜ್ಯದ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದಾರೆ ಎಂದ ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಉಳಿಸುವ ಬದಲಾಗಿ ಕನ್ನಡ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಯನ್ನು ಇನ್ನಷ್ಟು ಹೆಚ್ಚಿಸುವ ಬದಲಾಗಿ ಸಂಸ್ಕೃತ ವಿವಿಯ ಅಗತ್ಯ ಇಲ್ಲ. ಸಂಸದ ಪ್ರತಾಪ್ ಸಿಂಹನ ಹುಚ್ಚುತನ ಪ್ರಚಾರದ ಗೀಳಿಗೆ ಅವರಿವರ ಬಗ್ಗೆ ಮನಬಂದಂತೆ ಮಾತನಾಡುವುದು ಆತನ ಕಾಯಕವಾಗಿದೆ.
ಇದೇ ಕೊನೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ವಿರುದ್ಧ ಮತ್ತೊಂದು ಬಾರಿ ಏನಾದ್ರೂ ಟೀಕೆ ಪ್ರಹಾರ ನಡೆಸಿದರೆ ಪ್ರತಾಪ್ ಸಿಂಹ ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಮುತ್ತಿಗೆ ಹಾಕಿ ಛೀಮಾರಿ ಹಾಕಲು ಮುಂದಾಗಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ರವರಿಂದ ಎಚ್ಚರಿಕೆ ನೀಡಿದರು.