ಪ್ರಸಾದ್ ಮೌರ್ಯ ಪಕ್ಷ ತೊರೆದ ಬೆನ್ನಿಗೇ ಸಂಸದೆ ಸಂಘಮಿತ್ರ ಮೌರ್ಯ ಬಿಜೆಪಿಗೆ ಗುಡ್ ಬೈ

Prasthutha|

ಲಕ್ನೋ: ಪ್ರಸಾದ್ ಮೌರ್ಯ ಬಿಜೆಪಿ ತೊರೆದು ಎಸ್.ಪಿ.ಗೆ ಸೇರ್ಪಡೆಗೊಂಡ ಬೆನ್ನಲ್ಲೇ ಅವರ ಪುತ್ರಿ ಬದೌನ್ ನ ಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

- Advertisement -

ಉತ್ತರ ಪ್ರದೇಶದ ಓಬಿಸಿ ನಾಯಕರು ಈಗ ಬಿಜೆಪಿಯಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ. ಅವರ ಸಬ್ ಕಾ ಸಾತ್ ಸಬ್ ಕ ವಿಕಾಸ್ ಕೆಲವೇ ಮೇಲ್ಜಾತಿಯವರ ವಿಕಾಸವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯರಿಗಿಂತ ಮೊದಲು ಅವರ ಮಗ ಉತ್ಕೃಷ್ಟ್ ಬಿಜೆಪಿಗೆ ರಾಜ್ಯದಲ್ಲಿ ಬುದ್ಧಿ ಕಲಿಸಿಯೇ ತೀರುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಬೆನ್ನಿಗೆ ಮೌರ್ಯ ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ಬೆನ್ನಿಗೆ ಮೂವರು ಮಂತ್ರಿಗಳು, ಇಬ್ಬರು ಶಾಸಕರು ಬಿಜೆಪಿ ಬಿಟ್ಟಿದ್ದರು. ಇನ್ನೂ ಕೆಲವು ಶಾಸಕರು ಪಕ್ಷ ಬಿಡುವ ಸೂಚನೆ ಇತ್ತು.

- Advertisement -

ಈಗ ಉತ್ಕೃಷ್ಟ್ ಸಹೋದರಿ ಸಂಸದೆ 37ರ ಸಂಘಮಿತ್ರ ಬಿಜೆಪಿ ಬೇಡ ಎಂದಿದ್ದಾರೆ. ಅಂದರೆ ಓಬಿಸಿ ಮಹಿಳೆಯರು ಕೂಡ ಬಿಜೆಪಿಯಿಂದ ವಿಮುಖರಾಗುತ್ತಿರುವುದರ ಸೂಚನೆ ಇದು. ಸಂಘಮಿತ್ರ ಎಂಬಿಬಿಎಸ್ ವೈದ್ಯೆಯಾಗಿದ್ದು ಬಿಎಸ್ ಪಿಯಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಚುನಾವಣೆಗೆ ಮೊದಲು 2016ರಲ್ಲಿ ಅವರು ಬಿಜೆಪಿ ಸೇರಿದ್ದರು.

ಮೈನ್ ಪುರಿಯಲ್ಲಿ ಎಸ್ ಪಿಯ ಮುಲಾಯಂ ಸಿಂಗ್ ಯಾದವ್ ವಿರುದ್ಧ ಸ್ಪರ್ಧಿಸಿದ್ದ ಸಂಘಮಿತ್ರ ಸೋತಿದ್ದರು. ಮುಂದೆ ಬಿಜೆಪಿಯ ಬದೌನ್ ಸಂಸದೆಯಾಗಿದ್ದರು.

ಉತ್ಕೃಷ್ಟ್ ಅವರು ಉಂಚ್ ಹರ್ ಕ್ಷೇತ್ರದಲ್ಲಿ ಕಳೆದೆರಡು ವಿಧಾನ ಸಭಾ ಚುನಾವಣೆಗಳಲ್ಲಿ ಕ್ರಮವಾಗಿ ಬಿಎಸ್ ಪಿ ಮತ್ತು ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸಿ ಎಸ್ ಪಿ ಅಭ್ಯರ್ಥಿ ಕೈಯಲ್ಲಿ ಸೋತಿದ್ದರು. ಈಗ ಆ ಕ್ಷೇತ್ರದಲ್ಲಿ ಉತ್ಕೃಷ್ಟ್ ಗೆ ಟಿಕೆಟ್ ಪಡೆಯುವ ಆಶ್ವಾಸನೆಯೊಡನೆ ಸಂಘಮಿತ್ರ ಸಹ ಸಮಾಜವಾದಿ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗಿದೆ. 

“ರಾಜಕೀಯ ಮತ್ತು ಕುಟುಂಬ ಎರಡೂ ಬೇರೆ. ಸಂಘ ಪರಿವಾರದವರ ವಿರುದ್ಧ ಹೇಗೆ ಹೋರಾಡಬೇಕು ಎಂದು ನಾವು ಅಣ್ಣ ತಂಗಿ ಬಹಳ ಚೆನ್ನಾಗಿ ಬಲ್ಲೆವು. ನಾವು ಬಿಜೆಪಿಯಲ್ಲಿ ಸಂಘ ಪರಿವಾರದ ಹಿಡಿತ ಕಡಿದು ಹಾಕಲು ನೋಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು” ಎಂದು ಸಂಘಮಿತ್ರ ಹೇಳಿದ್ದಾರೆ.

ತಂದೆ, ಮಗ, ಮಗಳು ಮೂವರೂ 2016ರಲ್ಲಿ ಬಿಎಸ್ ಪಿಯಿಂದ ಬಿಜೆಪಿಗೆ ಸೇರಿದ್ದರಾದ್ದರಿಂದ ಈಗ ಮೂವರೂ ಒಟ್ಟಿಗೇ ಎಸ್ ಪಿಗೆ ಬಂದಿರುವುದರಲ್ಲಿ ಭಾರೀ ವಿಶೇಷವನ್ನು ಕೆಲವರು ಗಮನಿಸಿದ್ದಾರೆ.

Join Whatsapp