ಇಬ್ಬರು ಹೆಣ್ಣು ಮಕ್ಕಳ ತಾಯಿ, ಗ್ರಾ.ಪಂ. ಅಧ್ಯಕ್ಷೆಯ ಪಿಯುಸಿ ಸಾಧನೆ

Prasthutha|

ಪುತ್ತೂರು: ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ 38ರ ಭಾರತಿ ಭಟ್ ಅವರು ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು 421 ಅಂಕ ಪಡೆದು ಪಾಸಾಗಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳು ಅದಿತಿ 8ನೇ ತರಗತಿ, ಅನಘಾ 6ನೇ ತರಗತಿ ಓದುತ್ತಿದ್ದಾರೆ.

- Advertisement -

23 ವರುಷಗಳ ಹಿಂದೆ ತಂದೆ ಸತ್ತ ಕಾರಣ 8ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ್ದ ಭಾರತಿ ಭಟ್ 2021- 22ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು 54% ಅಂಕ ಪಡೆದು ಪಾಸಾಗಿದ್ದರು.

ಕಾಸರಗೋಡಿನ ಬದಿಯಡ್ಕ ಚಾಂಗುಳಿ ವೆಂಕಟ್ರಮಣ ಭಟ್ ಅವರನ್ನು ವಿವಾಹವಾಗಿ ಪಾಣಾಜೆಯಲ್ಲಿ ವಾಸವಾಗಿರುವ ಅವರು, ಎರಡು ವರ್ಷಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು.  

Join Whatsapp