ಅಹ್ಮದಾಬಾದ್: ನಲ್ವತ್ತು ವರ್ಷ ಪ್ರಾಯದ ಮಹಿಳೆಯೊಬ್ಬಳು 14ರ ಪ್ರಾಯದ ಬಾಲಕನ ಜೊತೆಗೆ ಓಡಿ ಹೋಗಿರುವ ಘಟನೆ ಗುಜರಾತಿನ ದಾಹೋದ್ ನ ಸುಕ್ಸರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಮಹಿಳೆಯು ಪತಿ ಮತ್ತು ಆರು ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಗಾಂಧಿನಗರದಲ್ಲಿ ಕಾರ್ಮಿಕರಾಗಿ ದುಡಿಯುವಾಗ ಬಾಲಕ ಮತ್ತು ಮಹಿಳೆಯ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ. ಈಗ ಪೊಲೀಸರು ಆತನ ಜನ್ಮ ಪತ್ರಕ್ಕಾಗಿ ಓಡಾಡುತ್ತಿದ್ದಾರೆ. ಆತ ಮೈನರ್ ಆಗಿದ್ದಲ್ಲಿ ಅವರ ಪೋಕ್ಸೋ- ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಅವರು ಆ ಮಹಿಳೆಯನ್ನು ಶಿಕ್ಷಿಸಲು ಸಾಧ್ಯವಾಗುತ್ತದೆ.
ದಾಹೋದ್ ನ ಫತೇಪುರದ ಆಮ್ಲಿಖೇಡ ಗ್ರಾಮದ ಹುಡುಗನ ಹೆತ್ತವರಿಂದ ಬರ್ತ್ ಸರ್ಟಿಫಿಕೇಟ್ ತರುವಂತೆ ಸುಕ್ಸರ್ ಪೊಲೀಸರು ಕೇಳಿಕೊಂಡಿದ್ದಾರೆ. “ಒಂದು ತಿಂಗಳಾಯಿತು. ಹುಡುಗನ ಕುಟುಂಬದವರು ನಮ್ಮ ಅಪ್ರಾಪ್ತ ಮಗನನ್ನು ಹಾರಿಸಿಕೊಂಡು ಹೋಗಿದ್ದಾಳೆ ಎಂದು ಮನೆಯವರು ದೂರು ನೀಡಿದ್ದಾರೆ. ಅವರ ಬಳಿ ಇರುವ ಆಧಾರ್ ಕಾರ್ಡ್ ನಲ್ಲಿ 2007 ಜನ್ಮ ವರ್ಷ ಎಂದಿದ್ದು, ಅದರ ಪ್ರಕಾರ ಬಾಲಕನಿಗೆ 14 ವರ್ಷವಾಗುತ್ತದೆ. ಆದರೆ ಹುಡುಗನ ತಂದೆಯನ್ನು ಪೊಲೀಸರು ವಿಚಾರಿಸಿದಾಗ ಹುಡುಗ ಹುಟ್ಟಿದ್ದು 1997ರಲ್ಲಿ ಎಂದು ತಿಳಿದುಬಂದಿದೆ” ಎಂದು ಸಬ್ ಇನ್ಸ್ ಪೆಕ್ಟರ್ ಎನ್. ಪಿ. ಸೆಲೋಟ್ ಹೇಳಿದರು.
ಎರಡೂ ಕುಟುಂಬಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಇದು ವಯಸ್ಸಿನ ಸಮಸ್ಯೆಯಲ್ಲ, ಹಣಕಾಸಿನ ಸಮಸ್ಯೆ ಎಂದು ತಿಳಿದು ಬಂದಿದೆ. ಈ ಸುತ್ತ ಮುಸ್ಲಿಮರಲ್ಲಿ ಯಾರಾದರೂ ಯಾರ ಜೊತೆಗಾದರೂ ಓಡಿ ಹೋದಾಗ ರಾಜಿ ಪಂಚಾಯತಿ ನಡೆಸಿ ಸರಿ ಪಡಿಸುವುದು ಕ್ರಮ. ಆಗ ಹಣಕಾಸಿನ ಕೊಡುಕೊಳ್ಳುವಿಕೆ, ದಂಡ ಇತ್ಯಾದಿ ಇರುತ್ತದೆ. ಇಲ್ಲಿ ಹಣಕಾಸಿನ ಮಾತುಕತೆ ಬಿದ್ದು ಹೋಗಿದೆ, ಹುಡುಗನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬಿಗಡಾಯಿಸುವ ಸ್ಥಿತಿಗೆ ಬಂದಿದೆ.
ನಾವು ಆ ಹುಡುಗ ಅಪಹರಿಸಿದ್ದಾನೆ ಎಂಬುದು ಸಹ ಸಂದೇಹಾಸ್ಪದ. ಗಾಂಧಿನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನುತ್ತಾರೆ. ಸುಕ್ಸರ್ ನಲ್ಲಿ ಯಾಕೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರದ ಬಗ್ಗೆಯೂ ತನಿಖೆ ನಡೆದಿದೆ ಎಂದು ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.