ಸಮುದಾಯದ ನಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಪೋಲಿಸರ ನಡೆ ಖಂಡನೀಯ : ಅಶ್ರಫ್ ಕಲ್ಲೇಗ

Prasthutha|

► ಜಾಬಿರ್ ಅರಿಯಡ್ಕ ಮತ್ತು ಸವದ್ ಕಲ್ಲರ್ಪೆ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ಆಗ್ರಹ

- Advertisement -

ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಗೂಂಡಾಗಳಿಂದ ನಿರಂತರವಾಗಿ ತ್ರಿಶೂಲದಿಂದ ಹಲ್ಲೆಗೊಳಗಾದ ಪುತ್ತೂರು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಮುಸ್ಲಿಂ ಮುಖಂಡ ಜಾಬೀರ್ ಅರಿಯಡ್ಕ ಹಾಗೂ ವಿದ್ಯಾರ್ಥಿ ನಾಯಕ ಸವಾದ್ ಕಲ್ಲಾರ್ಪೆ ಯವರ ಮೇಲೆ ಕೇಸು ದಾಖಲಿಸಿರುವುದನ್ನು ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ ನ ದ.ಕ ಜಿಲ್ಲಾಧ್ಯಕ್ಷರಾದ ಅಶ್ರಫ್ ತೀವ್ರವಾಗಿ ಖಂಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಹಲ್ಲೆಗೊಳಗಾದ ಅಮಾಯಕ ವಿದ್ಯಾರ್ಥಿಗಳ ಮೇಲೆಯೂ ಕೇಸು ದಾಖಲಿಸಿ, ಹಲ್ಲೆಗೈದ ಎಬಿವಿಪಿ ಗೂಂಡಾಗಳ ಮೇಲೆ ಜಾಮೀನು ಸಿಗುವ ಕೇಸು ದಾಖಲಿಸಿ ಆಡಳಿತ ಪಕ್ಷ ಮತ್ತು ಆರೆಸ್ಸೆಸ್‌ನ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಖಂಡನೀಯ ಎಂದಿದ್ದಾರೆ.

- Advertisement -

ಸಂಘಪರಿವಾರವನ್ನು ಮೆಚ್ಚಿಸಲು ಎರಡೂ ಕಡೆ ಕೇಸ್ ದಾಖಲಿಸಿರುವುದು ಯಾವ ನ್ಯಾಯ? ಸಂಘಪರಿವಾರದ ಅಣತಿಯಂತೆ ಎಷ್ಟೇ ಕೇಸ್ ದಾಖಲಿಸಿದರೂ ಮುಸ್ಲಿಂ ಸಮುದಾಯ ಮತ್ತು ಮುಖಂಡರನ್ನು ಬೆದರಿಸಲು ಸಾಧ್ಯವಿಲ್ಲ. ಆದ್ದರಿಂದ ಧಮಣಕಾರಿ ನೀತಿಯನ್ನು ಕೈ ಬಿಟ್ಟು, ಕಾನೂನಾತ್ಮಕವಾಗಿ ವರ್ತಿಸಬೇಕೆಂದು ಪೋಲಿಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದು ಅಶ್ರಫ್ ಕಲ್ಲೇಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp