ಮಗುವಿಗೆ ಹಾಲುಣಿಸುತ್ತಿರುವಾಗಲೇ ಹೃದಯಾಘಾತ: ತಾಯಿ ಸಾವು

Prasthutha|

ನಾಗರಕರ್ನೂಲ್ (ತೆಲಂಗಾಣ): ತನ್ನ ಮಗುವಿಗೆ ಹಾಲುಣಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಮೃತಪಟ್ಟಿರುವ ಹೃಯದ ವಿದ್ರಾವಕ ಘಟನೆಯೊಂದು ನಾಗರಕರ್ನೂಲ್ ಜಿಲ್ಲೆಯ ನೆರೆಲ್ಲಪಲ್ಲಿಯಲ್ಲಿ ನಡೆದಿದೆ.

- Advertisement -


ಜಯಶ್ರೀ (25) ಮೃತಪಟ್ಟವರು ಎಂದು ತಿಳಿದು ಬಂದಿದೆ.


ಜಯಶ್ರೀ ತಮ್ಮ ಮೊದಲ ಮಗುವಿನ ಹೆರಿಗೆಗಾಗಿ ಎರಡು ತಿಂಗಳ ಹಿಂದೆ ನೆರೆಲ್ಲಪಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಹೆಣ್ಣು ಮಗುವಾಗಿತ್ತು. ಇತ್ತೀಚೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಪತಿ ಪ್ರಶಾಂತ್, ಜಯಶ್ರೀ ಅವರನ್ನು ಚಿಕಿತ್ಸೆಗಾಗಿ ಮಹಬೂಬ್ ನಗರದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡ ಹೋಗಿದ್ದರು. ಅವರ ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಔಷಧದಿಂದ ಗುಣವಾಗುತ್ತದೆ ಎಂದು ವೈದ್ಯರು ಹೇಳಿದ್ದರು.

- Advertisement -


ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಜಯಶ್ರೀ ಮಗುವಿಗೆ ಹಾಲು ಕುಡಿಸುತ್ತಲೇ ಹೃದಯಾಘಾತ ಕಾಣಿಸಿಕೊಂಡು ನಿಧನರಾಗಿದ್ದಾರೆ.



Join Whatsapp