ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ

Prasthutha|

ಹೊಸದಿಲ್ಲಿ: ಕಳೆದ 15 ಆವೃತ್ತಿಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

- Advertisement -

ಮುಂಬೈ ಇಂಡಿಯನ್ಸ್ 231 ಪಂದ್ಯಗಳಲ್ಲಿ 1408 ಸಿಕ್ಸರ್‌ಗಳನ್ನು ಬಾರಿಸಿ ಮೊದಲ ಸ್ಥಾನವನ್ನು ಪಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 226 ಪಂದ್ಯಗಳಲ್ಲಿ 1377 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನವನ್ನು ಪಡೆದ ಪಂಜಾಬ್ ಕಿಂಗ್ಸ್ ತಂಡ 218 ಪಂದ್ಯಗಳಲ್ಲಿ 1276 ಸಿಕ್ಸರ್‌ಗಳನ್ನು ಬಾರಿಸಿದೆ.

- Advertisement -

ಚೆನ್ನೈ ಸೂಪರ್ ಕಿಂಗ್ಸ್ ತಂಡ 208 ಪಂದ್ಯಗಳಲ್ಲಿ 1268 ಸಿಕ್ಸರ್ ಬಾರಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 223 ಪಂದ್ಯಗಳಲ್ಲಿ 1226 ಸಿಕ್ಸರ್ ಬಾರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ 224 ಪಂದ್ಯಗಳಲ್ಲಿ 1147 ಸಿಕ್ಸರ್‌, ರಾಜಸ್ಥಾನ ರಾಯಲ್ಸ್ ತಂಡ 191 ಪಂದ್ಯಗಳಲ್ಲಿ 1011 ಸಿಕ್ಸರ್‌ಗಳನ್ನು ಬಾರಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ 152 ಪಂದ್ಯಗಳಲ್ಲಿ 777 ಸಿಕ್ಸರ್ ಬಾರಿಸಿದೆ.

ಕಳೆದ ಬಾರಿ ಹೊಸದಾಗಿ ಎಂಟ್ರಿಕೊಟ್ಟ ಲಕ್ನೋ ಸೂಪರ್ ಜೈಂಟ್ಸ್ ತಂಡ 15 ಪಂದ್ಯಗಳಲ್ಲಿ 115 ಸಿಕ್ಸರ್, ಗುಜರಾತ್ ಟೈಟಾನ್ಸ್ ತಂಡ 16 ಪಂದ್ಯಗಳಲ್ಲಿ 79 ಸಿಕ್ಸರ್ ಬಾರಿಸಿದೆ.

ಡೆಕ್ಕನ್ ಚಾರ್ಜರ್ಸ್ ತಂಡ 75 ಪಂದ್ಯಗಳಲ್ಲಿ 400 ಸಿಕ್ಸರ್, ಪುಣೆ ವಾರಿಯರ್ಸ್ ತಂಡ 46 ಪಂದ್ಯಗಳಲ್ಲಿ 196 ಸಿಕ್ಸರ್‌ಗಳನ್ನು ಬಾರಿಸಿದೆ. ಇದಲ್ಲದೇ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 30 ಪಂದ್ಯಗಳಲ್ಲಿ 257 ಸಿಕ್ಸರ್, ಗುಜರಾತ್ ಲಯನ್ಸ್ ತಂಡ 30 ಪಂದ್ಯಗಳಲ್ಲಿ 155 ಸಿಕ್ಸರ್, ಕೊಚ್ಚಿ ಟಸ್ಕರ್ಸ್ ಕೇರಳ 14 ಪಂದ್ಯಗಳಲ್ಲಿ 53 ಸಿಕ್ಸರ್ ಬಾರಿಸಿದೆ.

Join Whatsapp