ಪೊಲೀಸರು ಜಪ್ತಿ ಮಾಡಿದ್ದ 50ಕ್ಕೂ ಅಧಿಕ ವಾಹನಗಳು ಸುಟ್ಟು ಭಸ್ಮ

Prasthutha|

ಬೆಂಗಳೂರು: ನಗರದಲ್ಲಿ ಪೊಲೀಸರು ಜಪ್ತಿ ಮಾಡಿದ್ದ 50ಕ್ಕೂ ವಾಹನಗಳು ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ದುರ್ಘಟನೆ ಕೊಡಗೆಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಠಾಣೆಗೆ ಸಮೀಪದ ಟ್ರಾನ್ಸ್’ಫಾರ್ಮರ್ ಬಳಿ ವಾಹನಗಳನ್ನು ಪೊಲೀಸರು ನಿಲ್ಲಿಸಿದ್ದರು. ಆ ವೇಳೆ ಟ್ರಾನ್ಸ್’ಫಾರ್ಮರ್ ಬಳಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ವಾಹನಗಳು ಸುಟ್ಟುಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ 20-25 ನಿಮಿಷದ ಬಳಿಕ ಪೊಲೀಸರು ಬಂದಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು.
2002 ರಿಂದ 2017 ರತನಕ ವಿವಿಧ ಪ್ರಕರಣದಲ್ಲಿ ಬೈಕ್’ಗಳನ್ನು ಜಪ್ತಿ ಮಾಡಲಾಗಿದೆ. 20 ವರ್ಷ ಕಳೆದರೂ ಕೂಡ ಬೈಕ್’ಗಳನ್ನು ವಿಲೇವಾರಿ ಮಾಡದೆ ಕೋಡಿಗೆಹಳ್ಳಿ ಪೊಲೀಸರು ಹಾಗೇ ಧೂಳು ಹಿಡಿಯುವವರೆಗೂ ಬಿಟ್ಟಿದ್ದರು. ಬಿಬಿಎಂಪಿ ಜಾಗದಲ್ಲಿ ಜಪ್ತಿ ಮಾಡಿದ ವಾಹನಗಳನ್ನು ಕೋಡಿಗೆಹಳ್ಳಿ ಪೊಲೀಸರು ನಿಲ್ಲಿಸಿದ್ದ ಜಾಗದಲ್ಲಿ ವಾಹನಗಳ ಸುತ್ತಾ ಗಿಡಗಳು ಬೆಳೆದುಕೊಂಡಿದೆ.
ಒಂದೂವರೆ ತಿಂಗಳು ಕೂಡ ಸೀಜಿಂಗ್ ಮಾಡಿದ ವಾಹನ ಪಕ್ಕದಲ್ಲೇ ಬೆಂಕಿ ಅವಘಡ ನಡೆದಿತ್ತು. ಇಷ್ಟಾದರೂ ಎಚ್ಚೆತ್ತುಗೊಳ್ಳದೇ ಪೊಲೀಸರ ನಿರ್ಲಕ್ಷವೇ ಬೆಂಕಿ ಅವಘಡಕ್ಕೆ ಕಾರಣವೆನ್ನಲಾಗುತ್ತಿದೆ. ಇದೀಗ ಈ ಪ್ರಕರಣದಿಂದ ನುಣಿಚ್ಚಿಕೊಳ್ಳಲು ಯತ್ನಿಸುತ್ತಿರುವ ಕೋಡಿಗೆಹಳ್ಳಿ ಪೊಲೀಸರು ಬೆಸ್ಕಾಂ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

Join Whatsapp