ಮಡಿಕೇರಿ: ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯರು ಹಗಲಿನ ವೇಳೆ ತೋಟಕ್ಕೆ ತೆರಳಲು ಭಯಪಡುವಂತಾಗಿದೆ.
ಕಳೆದ ತಡರಾತ್ರಿ ಲಗ್ಗೆ ಇಟ್ಟಿರುವ 5 ರಿಂದ 6 ಕಾಡಾನೆಗಳನ್ನು ಒಳಗೊಂಡ ಹಿಂಡೊಂದು ಕೂತಿ ಗ್ರಾಮದ ಸಜನ್ ಎಂಬುವವರ ತೋಟದಲ್ಲಿ ತುಂಬಿಸಿಟ್ಟಿದ್ದ 10ಕ್ಕೂ ಹೆಚ್ಚು ಕಾಫಿ ಹಣ್ಣಿನ ಚೀಲಗಳನ್ನು ತುಳಿದು ಹಾಳು ಮಾಡಿದೆ.
ಅದಲ್ಲದೆ ಕಾಫಿ ಗಿಡ, ಬಾಳೆ, ಬೈನೆ ಮರಗಳನ್ನು ಧ್ವಂಸಗೊಳಿಸಿವೆ. ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಹಾಗೂ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.