ಖ್ಯಾತ ಪತ್ರಕರ್ತೆ ರಾಣಾ ಅಯ್ಯುಬ್ ವಿರುದ್ಧ ಹಣ ದುರುಪಯೋಗ ಆರೋಪ: ಎಫ್ ಐ ಆರ್ ದಾಖಲು

Prasthutha|

ಹೊಸದಿಲ್ಲಿ: ಖ್ಯಾತ ಪತ್ರಕರ್ತೆ ಮತ್ತು ಲೇಖಕಿ ರಾಣಾ ಅಯ್ಯೂಬ್ ವಿವಿಧ ಕಾರಣಗಳಿಗಾಗಿ ಆನ್ ಲೈನ್ ಅಭಿಯಾನದಲ್ಲಿ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಇದರಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ, 2010 ರ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಭಾರತದ ಹೊರಗಿನಿಂದ ಹಣವನ್ನು ಪಡೆದಿರುವ ಆರೋಪಗಳೂ ಸೇರಿವೆ.
ಅಯ್ಯೂಬ್ ವಿರುದ್ಧ ಇಂದಿರಪುರಂ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಗಾಜಿಯಾಬಾದ್ ನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

- Advertisement -


ಸೈಬರ್ ಪೊಲೀಸರ ಸೂಚನೆ ಮೇರೆಗೆ ಮಂಗಳವಾರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಂಜಯ್ ಪಾಂಡೆ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 403, 406, 418, 420 ಒಳಗೊಂಡಂತೆ ಎಫ್ ಐ ಆರ್ ವಿವಿಧ ವಿಭಾಗಗಳನ್ನು ಒಳಗೊಂಡಿದ್ದು, ಎಫ್ ಐ ಆರ್ 66 ಐಟಿ ಕಾಯ್ದೆಯ ಸೆಕ್ಷನ್ 4 ಡಿ ಮತ್ತು ಸೆಕ್ಷನ್ 4 ಹಣ ಅಕ್ರಮ ವರ್ಗಾವಣೆ ಕಾಯ್ದೆಯ ದೂರು ದಾಖಲಾಗಿದೆ ಎಂದು ಎಂದು ಅವರು ಹೇಳಿದರು.


ಆಗಸ್ಟ್ 28 2021 ರ ದೂರಿನ ಪ್ರಕಾರ ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗಾಗಿ ಆನ್ ಲೈನ್ ಅಭಿಯಾನಗಳು, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದ ಪರಿಹಾರ ಕಾರ್ಯಗಳು ಮತ್ತು ಕೋವಿಡ್ -19 ಪೀಡಿತ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಅಯ್ಯುಬ್ ಭಾರೀ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
ಸರ್ಕಾರಿ ಸಂಸ್ಥೆಗಳನ್ನು ನನ್ನ ವಿರುದ್ಧ ಛೂ ಬಿಡಲಾಗಿದೆ. ಇದು ಒಂದು ತಂತ್ರ, ನನ್ನನ್ನು ಮೌನವಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಯ್ಯುಬ್ ಪ್ರತಿಕ್ರಿಯಿಸಿದ್ದಾರೆ.

- Advertisement -