ಮಂಜೇಶ್ವರ ವ್ಯಾಪ್ತಿಯಲ್ಲಿ ಸಿ.ಸಿ.ಬಿ ಪೊಲೀಸರಿಂದ ಅಮಾಯಕರ ಬಂಧನ: ಎಸ್.ಡಿ.ಪಿ.ಐ ಖಂಡನೆ

Prasthutha|

ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಗಡಿ ಪ್ರದೇಶಗಳಾದ ಕುಂಜತ್ತೂರು ಮತ್ತು ಇತರ ಪ್ರದೇಶಗಳಿಂದ, ಕಾಸರಗೋಡು ಜಿಲ್ಲಾ ಪೊಲೀಸ್ ಅಧೀಕ್ಷಕರ ಅನುಮತಿ ಇಲ್ಲದೇ ಕರ್ನಾಟಕದ ಸಿ.ಸಿ.ಬಿ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಅಮಾಯಕ ಯುವಕರನ್ನು ಬಂಧಿಸುತ್ತಿರುವುದು ಆತಂಕಕಾರಿ. ಕರ್ನಾಟಕ ಪೊಲೀಸರ ಈ ಅನಧಿಕೃತ ನಡೆಯ ವಿರುದ್ಧ ತಕ್ಷಣವೇ ಮಧ್ಯಪ್ರವೇಶಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ತಿಳಿಸಿದರು.


ಕೇರಳ ರಾಜ್ಯದ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಲು ಆ ಪ್ರದೇಶದ ಅಧೀಕ್ಷಕರ ಅನುಮತಿ ಕಡ್ಡಾಯವಾಗಿದೆ. ಇದನ್ನು ತಿಳಿದೂ ತಮ್ಮ ಇಚ್ಛೆಗೆ ತಕ್ಕಂತೆ ಗಡಿ ಮೇರೆ ದಾಟಿ ಅನಧಿಕೃತವಾಗಿ ಅಮಾಯಕರನ್ನು ಬಂಧಿಸುವ ಕರ್ನಾಟಕ ಸಿ.ಸಿ.ಬಿ ಪೊಲೀಸರು ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ಜನರು ಬೀದಿಗಿಳಿಯುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -