ಐಟಿ ದಾಳಿಯಲ್ಲಿ ಪತ್ತೆಯಾದ ಹಣ ಬೆಜೆಪಿಯವರದ್ದು: ಸಚಿವ ಆರ್.ಬಿ. ತಿಮ್ಮಾಪುರ

Prasthutha|

ಚಿತ್ರದುರ್ಗ: ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾ ಪತಿ ಹಾಗೂ ಬಿಲ್ಡರ್ ಸಂತೋಷ್ ಮನೆಯಲ್ಲಿ ನಡೆದ ಐಟಿ ದಾಳಿಯಲ್ಲಿ ಸಿಕ್ಕ ಕೋಟ್ಯಂತರ ರೂಪಾಯಿ ಹಣಕ್ಕೆ ಸಂಬಂಧಿಸಿ ಬಿಜೆಪಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸುತ್ತಿರುವಾಗಲೇ ಆ ಹಣ ಬಿಜೆಪಿಗೆ ಸೇರಿದ್ದೆಂದು ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅವರು, ಪತ್ತೆಯಾದ ಹಣ ಬಿಜೆಪಿಗೆ ಸೇರಿದೆ ಎಂದು ನನಗೂ ಮಾಹಿತಿ ಇದೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಮಾಡಲು ಬೇರೆ ಕೆಲಸ ಇಲ್ಲ. ಗುತ್ತಿಗೆದಾರನ ಮನೆಯಲ್ಲಿ ಹಣ ಸಿಕ್ಕಿದ್ದು ಕಾಂಗ್ರೆಸ್ಸಿರದ್ದು ಅಂತಾರೆ. ಬಿಜೆಪಿಗೆ ಸೇರಿದ ಹಣ ಯಾಕೆ ಇರಬಾರದು? ಅವರೇನು ಸತ್ಯಹರಿಶ್ಚಂದ್ರರಾ? ಎಂದು ವಾಗ್ದಾಳಿ ನಡೆಸಿದರು.

ಅಬಕಾರಿ ಇಲಾಖೆಯಲ್ಲಿ ಬಹಳ ದಿನಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರ ತಡೆಯಲು ಮಹತ್ವದ ಹೆಜ್ಜೆ ಹಾಕುತ್ತಿದ್ದೇವೆ. ಬಾರ್ ರಿಲೇವಲ್ ಕೂಡ ಎರಡು ವರ್ಷಕ್ಕೆ ತೀರ್ಮಾನ ಮಾಡಿದ್ದೇವೆ. ನಾವು ಹೊಸ ಮದ್ಯದ ಅಂಗಡಿಗಳನ್ನು ತೆರೆಯಲ್ಲ ಎಂದು ಸಚಿವರು ಹೇಳಿದರು.

Join Whatsapp